ಮಡಿಕೇರಿ, ಜೂ. ೨೫: ತಾಲೂಕಿನ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಚೆಂಬು, ಪೆರಾಜೆ ಹಾಗೂ ಸಂಪಾಜೆ ಗ್ರಾಮಗಳಿಗೆ ಸಂಬAದಿಸಿದ ಪೌತಿ, ವಾರಸುದಾರಿಕೆ ಖಾತೆ ಆಂದೋಲನ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾ. ೨೭ ರಂದು ಬೆಳಿಗ್ಗೆ ೧೧ ಗಂಟೆಗೆ ಸಂಪಾಜೆ ನಾಡ ಕಚೇರಿಯಲ್ಲಿ ನಡೆಯಲಿದೆ. ಪೌತಿ, ವಾರಿಸುದಾರಿಕೆ ಖಾತೆ ಸಂಬAಧ ಖಾತೆದಾರರ ಮರಣ ದೃಢೀಕರಣ ಪತ್ರ, ಆರ್‌ಡಿ ಸಂಖ್ಯೆಯ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಜೊತೆಗೆ ಕಲಂ ೧೦ರಲ್ಲಿ ದಾಖಲಾಗಿರುವ ಮ್ಯೂಟೇಷನ್ ಪ್ರತಿ, ಜಮಾಬಂಧಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆ ಹಾಜರುಪಡಿಸಲು ಕಿರಣ್ ಗೌರಯ್ಯ ತಿಳಿಸಿದ್ದಾರೆ. ಚೆಂಬು, ಪೆರಾಜೆ ಹಾಗೂ ಸಂಪಾಜೆ ವ್ಯಾಪ್ತಿಯ ಎಲ್ಲ ರೈತ ಭಾಂದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಂದಾಯ ಪರಿವೀಕ್ಷಕ ವೆಂಕಟೇಶ್ ಕೋರಿದ್ದಾರೆ.