ವೀರಾಜಪೇಟೆ, ಜೂ. ೨೫: ಪುತ್ತೂರಿನ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ “ಕೃಷಿ ಮಾಹಿತಿ ಕಾರ್ಯಾಗಾರ” ವೀರಾಜ ಪೇಟೆಯ ಬೇಟೋಳಿ ಗ್ರಾಮದ ರಾಮ ನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸಭಾ ಭವನದಲ್ಲಿ ತಾ. ೨೬ ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ ಎಂದು ಸರಸ್ವತಿ ಕೆÀ್ರಡಿಟ್ ಸೌಹಾರ್ದ ಸಹಕಾರಿ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಮ್ಯಾನೇ ಜಿಂಗ್ ಟ್ರಸ್ಟಿ ಎಸ್.ಆರ್. ಸತೀ±್ಚÀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಕೆ.ವಿ. ವೀರೇಂದ್ರಕುಮಾರ್, ಡಾ. ಕೆ.ಎ. ದೇವಯ್ಯ ಹಾಗೂ ಡಾ. ಬಿ. ಪ್ರಭಾಕರ ತಾಂತ್ರಿಕ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿ.ಪಂ. ಮಾಜಿ ಸದಸ್ಯ ಕೆ.ಆರ್. ವಿನೋದ್, ಪುದುಪಾಡಿ ಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಡಾ. ಬಿ.ಬಿ. ರಾಮಕೃಷ್ಣ ಕಾರ್ಯಾನುಗುಣ ನಿರ್ದೇಶಕ ಶ್ರೀಕಾಂತ್ ರಾವ್ ಅತಿಥಿಗ ಳಾಗಿ ಪಾಲ್ಗೊಳ್ಳಲಿದ್ದು ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ.ಆರ್. ವೇದಾತ್ಮ ಉದ್ಘಾಟನೆ ನೆರವೇರಿ ಸಲಿದ್ದಾರೆ ಎಂದು ಮಾಹಿತಿ ನೀಡಿದೆ.