ಮಡಿಕೇರಿ, ಜೂ. ೨೫: ನಗರ ಸಭಾ ವ್ಯಾಪ್ತಿಯಲ್ಲಿರುವ ವಿವಿಧ ಅಂಗಡಿ ಮುಂಗಟ್ಟು ಉದ್ದಿಮೆದಾ ರರ ೨೦೨೩-೨೪ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯು ಈಗಾಗಲೇ ಏಪ್ರಿಲ್ ೧ ರಿಂದ ಪ್ರಾರಂ ಭವಾಗಿದ್ದು, ೧೮೩೮ ಅಧಿಕೃತ ಉದ್ದಿಮೆ ಪರವಾನಿಗೆಗಳ ಪೈಕಿ ೧೪೮ ಉದ್ದಿಮೆದಾ ರರು ಮಾತ್ರ ನವೀಕರಿಸಿಕೊಂಡಿದ್ದಾರೆ.
ಉದ್ದಿಮೆ ಪರವಾನಿಗೆ ನವೀಕರಿ ಸದೆ ವ್ಯಾಪಾರ ವಹಿವಾಟು ಮಾಡು ತ್ತಿರುವುದು ೧೯೬೪ರ ಪೌರಸಭೆಗಳ ಅಧಿನಿಯಮ ಕಲಂ ೨೪೩ಕ್ಕೆ ವಿರುದ್ಧ ವಾಗಿದೆ. ಈ ಬಗ್ಗೆ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಸರ್ಕಾರದ ಆದೇಶದಂತೆ ವ್ಯಾಪಾರ ತಂತ್ರಾAಶದಲ್ಲಿ ಕಚೇರಿಗೆ ಅರ್ಜಿ ಸಲ್ಲಿಸದೆ ಉದ್ದಿಮೆದಾರರು ಸ್ವಯಂ ಚಾಲಿತವಾಗಿ ನಿಗದಿತ ಶುಲ್ಕ ಪಾವ ತಿಸಿ ಆನ್‌ಲೈನ್‌ನಲ್ಲಿ ನವೀಕರಣಗೊಳಿ ಸುವ ಅವಕಾಶವಿದ್ದು, ಅದರಂತೆ ಚಾಲ್ತಿ ಯಲ್ಲಿರುವ ಉದ್ದಿಮೆದಾರರು ಪ್ರಸಕ್ತ ವರ್ಷದ ನವೀಕರಣವನ್ನು ಮಾಡಿಕೊಳ್ಳ ಬಹುದು. ಉಳಿದಂತೆ ಒಂದು ವರ್ಷ ಕ್ಕಿಂತ ಹೆಚ್ಚು ನವೀಕರಣವಿರುವ ಉದ್ದಿ ಮೆದಾರರು ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಹಳೆಯ ಉದ್ದಿಮೆ ಪರವಾ ನಿಗೆ ಮತ್ತು ತೆರಿಗೆ ಪಾವತಿಯ ರಶೀ ದಿಗಳನ್ನು ಮಾತ್ರ ಅಡಕಗೊಳಿಸಿ ೪೮ ಗಂಟೆ ಒಳಗೆ ನವೀಕರಣಗೊ ಳಿಸಿಕೊಳ್ಳುವಂತೆ ಸರಳಿಕರಣ ಮಾಡ ಲಾಗಿದೆ. ಈ ಸದಾವಕಾಶ ಉಪ ಯೋಗಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ hಣಣಠಿ://ತಿತಿತಿ. mಚಿಜiಞeಡಿiಛಿiಣಥಿ.mಡಿಛಿ.gov.iಟಿ ಅಥವಾ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರ ಸಭೆ ಪೌರಾಯುಕ್ತ ವಿಜಯ ಕೋರಿದ್ದಾರೆ.