ಶನಿವಾರಸಂತೆ, ಜೂ. ೨೪: ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಣ ದಷ್ಟೇ ಸಂಸ್ಕಾರವೂ ಮುಖ್ಯವಾಗಿದ್ದು, ನಡೆ-ನುಡಿಯಲ್ಲಿ ಸಂಸ್ಕಾರ ಅಭಿವ್ಯಕ್ತ ಗೊಳ್ಳಬೇಕು ಎಂದು ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇ ಜಿನ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾ ರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಯಾಡಿದರು.
ಭವಿಷ್ಯದ ಪ್ರಜೆಗಳಾದ ವಿದ್ಯಾ ರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸುವ ಗುರಿ ಹೊಂದಿದ್ದು ನನಸಾಗಿಸುವ ಪ್ರಯತ್ನ ಧನಾತ್ಮಕ ವಾಗಿರಬೇಕು. ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ವಿದ್ಯಾರ್ಥಿಗಳು ಉತ್ತಮ ನಾಗರಿಕ ರಾಗಿ ರೂಪುಗೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.
ವಿದ್ಯಾಸAಸ್ಥೆ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಹಾಗೂ ಸಾಹಿತಿ ಶ.ಗ.ನಯನತಾರಾ ಮಾತನಾಡಿ, ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಳ್ಳ್ಳುವುದರಿಂದ ವಿದ್ಯಾರ್ಥಿಗಳು ಶಿಸ್ತು, ಸಹನೆ, ಸಮಯಪ್ರಜ್ಞೆ, ಸಹಬಾಳ್ವೆಯೊಂದಿಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.
ಉಪನ್ಯಾಸಕ ಬಿ.ಎಂ.ಪೊನ್ನಪ್ಪ “ಎನ್ನೆಸ್ಸೆಸ್ ಸುವರ್ಣವಕಾಶ’’ ಎಂಬ ಸ್ವರಚಿತ ಕವನ ವಾಚಿಸಿದರು. ಶಿಬಿರಾರ್ಥಿ ವಿದ್ಯಾರ್ಥಿಗಳಾದ ಪ್ರಸಾದ್, ಕಿರಣ್, ಸಂಜನಾ ಅನಿಸಿಕೆ ಹಂಚಿಕೊAಡರು. ಧ್ರುವಂತ್ ತಂಡ ಹಾಗೂ ನಿತಿನ್ ತಂಡದ ವಿದ್ಯಾರ್ಥಿಗಳು ರಾಷ್ಟಿçÃಯ ಸೇವಾ ಯೋಜನೆ ಗೀತೆಯನ್ನು ಹಾಡಿ ರಂಜಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಈ.ಎಂ.ದಯಾನAದ್ ಮಾತನಾಡಿದರು.
ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್, ವಿದ್ಯಾಸಂಸ್ಥೆ ನಿರ್ದೇಶಕ ಕೆ.ಸಿ.ಉತ್ತಪ್ಪ, ಮುಖ್ಯಶಿಕ್ಷಕ ಚಂದ್ರಶೇಖರ್, ಶಿಬಿರಾ ಧಿಕಾರಿ ಎಂ.ಎನ್. ಹರೀಶ್, ಸಹ ನಿರ್ದೇಶಕಿ ಟಿ.ಜೆ. ಶೋಭಾ, ವಿದ್ಯಾರ್ಥಿ ನಾಯಕರಾದ ರಂಜಿತ್, ಸಿಂಧೂ, ಅಂಜಲಿ, ಶಿಕ್ಷಕರು, ಅಂಗನವಾಡಿ ಶಿಕ್ಷಕಿ ಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು..