ನಾಪೋಕ್ಲು, ಜೂ. ೨೪: ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ನಿಗದಿತ ಸಮಯಕ್ಕೆ ಸಂಚರಿಸದೆ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾ ಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ನಾಪೋಕ್ಲು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿAದ ನಾಪೋಕ್ಲು ಮುಖಾಂತರ ಭಾಗಮಂಡಲಕ್ಕೆ ತೆರಳುವ ಸರ್ಕಾರಿ ಬಸ್‌ಗಳು ನಿಗದಿತ ಸಮಯಕ್ಕೆ ಬರುತ್ತಿಲ್ಲ. ವಾರದಲ್ಲಿ ಎರಡು ಮೂರು ದಿನಗಳು ಮಾತ್ರ ಸಂಚರಿಸುತ್ತಿದ್ದು ಈ ಬಸ್ಸುಗಳ ಮೂಲಕ ಶಾಲಾ ಕಾಲೇಜುಗಳಿಂದ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿ ಗಳು ಆರೋಪಿಸಿದರು.

ನಾಪೋಕ್ಲುವಿನಿಂದ ನೆಲಜಿ, ಬಲಮಾವಟಿ, ಅಯ್ಯಂಗೇರಿ ಮೂಲಕ ಪ್ರತಿನಿತ್ಯ ಸಂಜೆ ೪ ಬಸ್ಸುಗಳು ಭಾಗಮಂಡಲಕ್ಕೆ ತೆರಳುತ್ತಿದ್ದು ಇತ್ತೀಚಿನ ದಿನಗಳಲ್ಲಿ ಕೆಲವು ಬಸ್‌ಗಳು ಇಲ್ಲಿಯ ಸಂತೆ ಮೈದಾನದಲ್ಲಿ ಸ್ಥಗಿತಗೊಳಿಸ ಲಾಗುತಿದ್ದು ನಿಯಮಿತವಾಗಿ ಸಂಚರಿಸುತ್ತಿಲ್ಲ. ವಾರದಲ್ಲಿ ಎರಡು ಮೂರು ದಿನಗಳು ಮಾತ್ರ ಬರುವುದರಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆಯನ್ನು ಎದುರಿಸುವಂತೆ ಆಗಿದೆ. ನಾಪೋಕ್ಲುವಿಗೆ ತಡವಾಗಿ ಆಗಮಿಸುವ ಬಸ್ಸುಗಳು ಸಂತೆ ಮೈದಾನದಲ್ಲಿ ನಿಲುಗಡೆಗೊಳ್ಳುತ್ತಿವೆ. ಇಲ್ಲಿಂದ ಮುಂದಕ್ಕೆ ತೆರಳುತ್ತಿಲ್ಲ. ನಾವು ಪ್ರತಿನಿತ್ಯ ಬಸ್ಸಿಗಾಗಿ ಕಾದು ಸಮಸ್ಯೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಇದಕ್ಕೆ ಸಂಬAಧಿಸಿದವರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಇಲ್ಲಿಯ ಪೊಲೀಸ್ ಠಾಣೆ ಠಾಣಾಧಿಕಾರಿ ಮಂಜುನಾಥ ಅವರಿಗೆ ದೂರು ಸಲ್ಲಿಸಿದರು.

ಬಸ್ ಸಮಸ್ಯೆ ಪರಿಹರಿಸಲು ವಿದ್ಯಾರ್ಥಿಗಳು ನೀಡಿದ ಮನವಿ ಯನ್ನು ಪರಿಗಣಿಸಿದ ಠಾಣಾಧಿಕಾರಿ ಮಂಜುನಾಥ್ ಡಿಪೋ ವ್ಯವಸ್ಥಾಪಕ ರೊಂದಿಗೆ ದೂರವಾಣಿ ಕರೆ ಮಾಡಿ ಜನಸಾಮಾನ್ಯರಿಗೆ ಅನುಕೂಲವಾ ಗದಂತೆ ಸೂಕ್ತ ಸೌಲಭ್ಯ ಒದಗಿಸು ವಂತೆ ಕೋರಿದರು. ಹಾಗೂ ಇಂತಹ ಯಾವುದೇ ಸಮಸ್ಯೆಗ ಳಿದ್ದರೂ ಕಾನೂನು ಕೈಗೆತ್ತಿಕೊಳ್ಳದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ತಮ್ಮ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕೆಲವು ದಿನಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಮರ್ಪಕವಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ಸಂಚರಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮಾಡಿಸಿ ಪ್ರಯೋಜನ ಇಲ್ಲದಾಗಿದೆ. ಕೂಡಲೆ ಇದಕ್ಕೆ ಸಂಬAಧಿಸಿದವರು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ವನ್ಯಜೀವಿ ಹಾವಳಿಯಿಂದ ಭಯದಲ್ಲಿ ಓಡಾಡುವ ಪರಿಸ್ಥಿತಿಯೂ ಇದೆ. ಸಮಸ್ಯೆ ಪರಿಹರಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತಿದೆ ಎಂದು ಪೋಷಕರಾದ ಕೃಷ್ಣಪ್ಪ, ಲಿಂಗಪ್ಪ, ಶೇಖರ ಎಚ್ಚರಿಸಿದ್ದಾರೆ.