ಮುಳ್ಳೂರು, ಜೂ. ೨೪: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ವಿಶೇಷಚೇತನ ತೇಜಸ್ ಎಂಬವರು ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ವತಿಯಿಂದ ಶೇ. ೫ರ ವಿಶೇಷಚೇತನರ ಕಲ್ಯಾಣ ಅನುದಾನದಿಂದ ಸಹಾಯ ಒದಗಿಸಲಾಯಿತು. ವಿಶೇಷ ಚೇತನ ತೇಜಸ್ ಅವರ ಮನೆಗೆ ತೆರಳಿ ಸಹಾಯಧನ ನೀಡಲಾಯಿತು.

ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಪಿ.ಎನ್. ಗಂಗಾಧರ್, ಮುತ್ತಮ್ಮ, ಯಮುನಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಚ್.ಡಿ. ಹರೀಶ್ ಹಾಜರಿದ್ದರು.