ಮಡಿಕೇರಿ, ಜೂ. ೨೪: ಸರಕಾರ ಬಡವರ್ಗದ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡಲಾಗು ತ್ತಿರುವ ಉಚಿತ ಪಡಿತರ(ಅಕ್ಕಿ) ಪಡೆದುಕೊಳ್ಳಲು ಗ್ರಾಹಕರು ಪರದಾಡಬೇಕಾದ ಸನ್ನಿವೇಶ ಎದುರಾಗಿದೆ.

ಈ ಹಿಂದಿನ ಸರಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೋರ್ವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ಉಚಿತವಾಗಿ ಹತ್ತು ಕೆ.ಜಿ. ಅಕ್ಕಿ ವಿತರಣೆ ಮಾಡುವ ಯೋಜನೆ ಜಾರಿಗೆ ತಂದಿತ್ತು. ನಂತರದಲ್ಲಿ ಕಳೆದ ಕೆಲವು ತಿಂಗಳಿನಿAದ ಆರು ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲು ಕೂಡ ಸೇರಿದೆ. ಆದರೆ, ಇದೀಗ ಆರು ಕೆ.ಜಿ. ಅಕ್ಕಿಯನ್ನು ಪಡೆದುಕೊಳ್ಳಲು ಗ್ರಾಹಕರು ಪರದಾಡುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ನ್ಯಾಯ ಬೆಲೆ ಅಂಗಡಿ ಎದುರು ಸಾಲಿನಲ್ಲಿ ನಿಂತು ಕಾದರೂ ಪಡಿತರ ಸಿಗದೆ ವಾಪಸ್ ಮರಳುವಂತಹ ದುಸ್ಥಿತಿ ಎದುರಾಗಿದೆ.

ಪಡಿತರ ಪಡೆದುಕೊಳ್ಳಲು ಹೆಬ್ಬೆಟ್ಟು ಗುರುತು (ಥಂಬ್) ನೀಡಬೇಕಾಗಿದ್ದು, ರಾಜ್ಯಾದ್ಯಂತ ಇದಕ್ಕೆ ಒಂದೇ ಸರ್ವರ್ ಅಳವಡಿಸಲಾಗಿದೆ. ಸಾಮಾನ್ಯವಾಗಿ ತಿಂಗಳ ಅಂತ್ಯದವರೆಗೆ ಪಡಿತರ ಪಡೆದುಕೊಳ್ಳಲು ಅವಕಾಶವಿದ್ದರೂ, ಈ ತಿಂಗಳಲ್ಲಿ ತಾ.೨೬ರ ಒಳಗಡೆ ಪಡಿತರ ಪಡೆದುಕೊಳ್ಳುವಂತೆ ಆಹಾರ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಗ್ರಾಹಕರು ಪಡಿತರ ಹೊಂದಿಕೊಳ್ಳಲು ನ್ಯಾಯ ಬೆಲೆ ಅಂಗಡಿಗಳಿಗೆ ಆಗಮಿಸುತ್ತಿದ್ದಾರೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ದಿನವಿಡಿ ಕಾದರೂ ಪಡಿತರ ಸಿಗದೆ ವಾಪಸಾಗುವುದು, ಮರಳಿ ಮರುದಿನ ಬರುವುದು ಸಾಮಾನ್ಯವಾಗಿದೆ.

ಈ ನಡುವೆ ಇದೀಗ ನೂತನ ಸರಕಾರದ ಉಚಿತ ಭಾಗ್ಯಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಆರಂಭವಾಗಿದ್ದು, ಇದೂ ಕೂಡ ಆನ್‌ಲೈನ್ ಮೂಲಕ ಸಲ್ಲಿಸುವ ಪ್ರಕ್ರಿಯೆಯಾಗಿದೆ. ಜನತೆ ಇದಕ್ಕೆ ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದು, ಇದರಿಂದಲೂ ಸರ್ವರ್ ಸಮಸ್ಯೆ ತಲೆದೋರುತ್ತಿದೆ. ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಿದಲ್ಲಿ ಪಡಿತರ ಹೊಂದಿಕೊಳ್ಳಲು ಅಷ್ಟೊಂದು ಸಮಸ್ಯೆ ಎದುರಾಗುವುದಿಲ್ಲ ಎಂಬುದು ನ್ಯಾಯ ಬೆಲೆ ಅಂಗಡಿ ನಡೆಸುತ್ತಿರುವವರು ಹೇಳುತ್ತಿದ್ದಾರೆ. ಬಡ ಕೂಲಿ ಕಾರ್ಮಿಕರು ತಮ್ಮ ಕೆಲಸ ಬಿಟ್ಟು ದೂರದಿಂದ ಬಾಡಿಗೆ ವಾಹನಗಳಲ್ಲಿ ಬಂದು, ಸಾಲಿನಲ್ಲಿ ನಿಂತು ಪಡಿತರ ಸಿಗದೆ ವಾಪಸ್ ಮರಳುವಾಗ ವ್ಯವಸ್ಥೆ ವಿರುದ್ಧ ಹಿಡಿ ಸಾಪ ಹಾಕುತ್ತಾ ತೆರಳುವದು ಸಾಮಾನ್ಯ ವಾಗಿದೆ. ತಾ.೨೬ರಂದು ಕೂಡ ಸಿಗದಿದ್ದಲ್ಲಿ ಒಂದು ತಿಂಗಳ ಪಡಿತರ ಕೈಚೆಲ್ಲಿ ಹೋಗುತ್ತದೆ ಎಂಬ ಆತಂಕದಿAದ ಮಳೆ ಬರುತ್ತಿದ್ದರೂ ಊಟ, ಉಪಚಾರಗಳನ್ನು ಬಿಟ್ಟು ಸಾಲಿನಲ್ಲಿ ನಿಲ್ಲುತ್ತಿರುವದು ಕಂಡುಬರುತ್ತಿದೆ.

ಈ ನಡುವೆ ಸರ್ವರ್‌ಗಾಗಿ ನ್ಯಾಯಬೆಲೆ

(ಮೊದಲ ಪುಟದಿಂದ) ಅಂಗಡಿ ನಡೆಸುವವರು ಕೂಡ ತಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಚಾಲೂ ಮಾಡಿಕೊಂಡು ಬೆಳಿಗ್ಗೆಯಿಂದ ಸಂಜೆಗತ್ತಲವರೆಗೂ ಕಾಯುತ್ತಾ ಕುಳಿತುಕೊಳ್ಳುವುದೇ ಕಾಯಕವಾಗಿದೆ. ತಡವಾಗುತ್ತಲೇ ಗ್ರಾಹಕರಿಂದ ಬೈಗುಳಗಳನ್ನು ಕೇಳುವಂತಹ ದುಸ್ಥಿತಿಯನ್ನು ಕೂಡ ಎದುರಿಸಬೇಕಾಗಿದೆ. ‘ಈಗಲೇ ಸರ್ವರ್ ಸಮಸ್ಯೆ ಅಂತ ದಿನಗಟ್ಟಲೆ ಕಾಯಬೇಕಾಗಿದೆ, ೨೭ರಿಂದ ಪಡಿತರ ಇಲ್ಲ ಎಂದು ಬೇರೆ ಹೇಳಲಾಗುತ್ತಿದೆ., ಮುಂದಕ್ಕೆ ಏನಾಗುತ್ತದೋ..?’ ಎಂದು ಬಡ ಗ್ರಾಹಕರು ತಮ್ಮ ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ..! ? ಸಂತೋಷ್