ಮಡಿಕೇರಿ, ಜೂ. ೨೪: ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆಯಲು ಕೊಡಗು ಜಿಲ್ಲೆಯ ಗೃಹ ಬಳಕೆಯ ವಿದ್ಯುತ್ ಗ್ರಾಹಕರು ಸೂಕ್ತ ದಾಖಲಾತಿಗಳೊಂದಿಗೆ ಮಡಿಕೇರಿ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿ, ಮಡಿಕೇರಿ, ಕುಶಾಲನಗರ ಸೋಮವಾರ ಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ ಕಾರ್ಯ ಮತ್ತು ಪಾಲನಾ ಉಪವಿಭಾಗ/ಶಾಖಾ ಕಚೇರಿ ಹಾಗೂ ತಾಳತ್ಮನೆ, ಸಂಪಾಜೆ, ಭಾಗಮಂಡಲ, ಮೂರ್ನಾಡು, ನಾಪೋಕ್ಲು, ಕೂಡಿಗೆ, ಸುಂಟಿಕೊಪ್ಪ, ಚೆಟ್ಟಳ್ಳಿ, ಮಾದಾ ಪುರ, ಶಾಂತಳ್ಳಿ, ಶನಿವಾರಸಂತೆ, ಆಲೂರು ಸಿದ್ದಾಪುರ, ಕೊಡ್ಲಿಪೇಟೆ, ಶ್ರೀಮಂಗಲ, ಬಾಳೆಲೆ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಕಾರ್ಯ ಮತ್ತು ಪಾಲನಾ ಶಾಖಾ ಕಚೇರಿಗಳಲ್ಲಿ ಚಾ.ವಿ.ಸ.ನಿ.ನಿ. (ಅಇSಅಔಒ) ಕಚೇರಿಗಳ ಗೃಹಜ್ಯೋತಿ ಕೌಂಟರ್ಗಳಿಗೆ ಭೇಟಿ ನೀಡಿ ಅರ್ಜಿ ನೋಂದಾಯಿಸಿಕೊಳ್ಳಬಹುದು.
ಸಾರ್ವಜನಿಕರು ನಿಮ್ಮ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, ಸಮೀಪದ ಕರ್ನಾಟಕ-೧, ಗ್ರಾಮ-೧, ಗ್ರಾಮ ಪಂಚಾಯತ್ ಮತ್ತು ನಾಡ ಕಚೇರಿಗಳಲ್ಲಿ ಹಾಗೂ ಸೇವಾ ಸಿಂಧು ಆನ್ಲೈನ್ ತಂತ್ರಾAಶದಲ್ಲೂ ಕೂಡ ಗೃಹಜ್ಯೋತಿ ಯೋಜನೆಯ ಅರ್ಜಿಯನ್ನು ನೋಂದಾಯಿಸಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.