ಮಡಿಕೇರಿ, ಜೂ. ೨೪: ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವ ಹಿಸಿ ಇದೀಗ ವರ್ಗಾವಣೆಯಾಗಿರುವ ಡಾ.ಬಿ.ಸಿ. ಸತೀಶ್ ಅವರಿಗೆ ಅಂರ‍್ರಾಷ್ಟಿçÃಯ ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಘಟಕದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಮಡಿಕೇರಿಯಲ್ಲಿ ಸುಸಜ್ಜಿತವಾದ ರೆಡ್ ಕ್ರಾಸ್ ಭವನ ನಿರ್ಮಾಣ ವಾಗುವಲ್ಲಿ ಜಿಲ್ಲಾಧಿಕಾರಿಯಾಗಿದ್ದ ಬಿ.ಸಿ.ಸತೀಶ್ ಅವರ ಕೊಡುಗೆ ಮಹತ್ವದ್ದಾಗಿತ್ತು. ಕಳೆದ ವರ್ಷ ಮಳೆಗಾಲದಲ್ಲಿ ಕಾಳಜಿ ಕೇಂದ್ರವನ್ನು ರೆಡ್‌ಕ್ರಾಸ್ ಸಭಾಭವನದಲ್ಲಿ ಪ್ರಾರಂಭಿಸಿ, ಅನೇಕ ಸಂತ್ರಸ್ತರಿಗೆ ನೆರವು ನೀಡುವಲ್ಲಿಯೂ ಸತೀಶ್ ಅವರು ಕಾಳಜಿ ತೋರಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭ ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಅನಿಲ್ ಎಚ್.ಟಿ, ಪ್ರಧಾನ ಕಾರ್ಯ ದರ್ಶಿ ಮುರಳೀಧರ್ ಹಾಜರಿದ್ದರು.