ಕೂಡಿಗೆ, ಜೂ. ೨೩: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಪೂರ್ಣಿಮಾ ಎಂಬವರ ಮನೆಯಲ್ಲಿ ಉಂಟಾದ ಶಾರ್ಟ್ ಸರ್ಕೂಟ್‌ನಿಂದ ಗೃಹೋಪಯೋಗಿ ವಸ್ತುಗಳು ಬೆಂಕಿ ಗಾಹುತಿಯಾದ ಘಟನೆ ಗುರುವಾರ ತಡರಾತಿ ನಡೆದಿದೆ.

ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಫ್ರಿಡ್ಜ್, ಪೀಠೋಪಕರಣಗಳು ಸೇರಿದಂತೆ ದಾಖಲೆ ಪತ್ರಗಳು ನಾಶವಾಗಿದ್ದು, ಗೋಡೆ ಬಿರುಕುಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ.