ಮಡಿಕೇರಿ, ಜೂ. ೨೩: ಗೌಡ ಮಹಿಳಾ ಒಕ್ಕೂಟ (ರಿ), ಕೊಡಗು, ಗೌಡ ಸಮಾಜ ಕಟ್ಟಡ ಮಡಿಕೇರಿ ವತಿಯಿಂದ ಅರೆಭಾಷೆ ಭಾವಗೀತೆಗಳ ಸಂಕಲನವನ್ನು ಹೊರತರಲು ಯೋಜಿಸಿದ್ದು, ಆಸಕ್ತರು ಈ ಹಿಂದೆ ಎಲ್ಲೂ ಪ್ರಕಟಗೊಂಡಿರದ ಸ್ವಂತ ರಚನೆಯ ಅರೆಭಾಷೆ ಭಾವಗೀತೆಗಳನ್ನು ೨೦ ಸಾಲುಗಳಿಗೆ ಮೀರದಂತೆ ಸ್ವ ವಿವರ ಹಾಗೂ ಭಾವಚಿತ್ರದೊಂದಿಗೆ (ಪ್ರತ್ಯೇಕ ಹಾಳೆಗಳಲ್ಲಿ) ದಿನಾಂಕ ೧೫.೭.೨೦೨೩ರೊಳಗೆ ಒಕ್ಕೂಟದ ಕಚೇರಿಗೆ ತಲುಪಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಮೊ. ೯೮೪೫೫೬೭೬೯೮ ಸಂಪರ್ಕಿಸಬಹುದು.