ಪ್ರತಿಯೊಂದು ಹಬ್ಬ, ಆಚರಣೆ, ಮಾಡುವ ಕಾಯಕಗಳಿಗೂ ಒಂದೊAದು ದಿನವಿದೆ., ಅಂತೆಯೇ ಎಲ್ಲರ ಜನ ಮನರಂಜಿಸುವ ಕ್ರೀಡೆಗೂ ಒಂದು ದಿನವಿದೆ.., ಅದರಲ್ಲೂ ವಿಶ್ವದ ಐದು ಖಂಡಗಳು ಒಟ್ಟಾಗಿ ಪ್ರತಿನಿ ಧಿಸುವ ಒಲಂಪಿಕ್ ಎಂಬ ಬೃಹತ್ ಕ್ರೀಡಾಕೂಟಕ್ಕೂ ತನ್ನದೇ ಆದ ಒಂದು ದಿನವಿದೆ. ‘ಫಿಟ್‌ನೆಸ್ ಮತ್ತು ಸ್ಪೋರ್ಟ್ಸ್’ಗಾಗಿ ಎಂದು ಈ ದಿನವನ್ನು ಮೀಸಲಿಡಲಾಗಿದ್ದು, ಇಂದು ಆ ಸುದಿನವಾಗಿದೆ..!

ಪ್ರತಿ ವರ್ಷ ಜೂನ್ ೨೩ ಅನ್ನು ಅಂತರರಾಷ್ಟಿçÃಯ ಒಲಂಪಿಕ್ ದಿನ ವನ್ನಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್‌ನೊಂದಿಗೆ ಆಚರಿಸಲಾಗು ತ್ತಿದ್ದು, ‘ಲೆಟ್ಸ್ ಮೂವ್’ ಎಂಬುದು ಈ ವರ್ಷದ ಥೀಮ್ ಆಗಿದೆ. ಯಾವುದೇ ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಶಕ್ತಿಯು ತವಾಗಿರಲು, ಫಿಟ್‌ನೆಸ್ ಗುರಿಗಳನ್ನು ಹೊಂದಿಸಲು, ಜನರನ್ನು ಪ್ರೋತ್ಸಾ ಹಿಸಲು ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಒಲಂಪಿಕ್ ಕ್ರೀಡಾಕೂಟದ ಮೂಲ ಗ್ರೀಸ್ ದೇಶದ್ದಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಮೂರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡುತ್ತಾ ಬರಲಾ ಗುತ್ತಿತ್ತು. ಕ್ರಮೇಣ ಈ ಕ್ರೀಡಾ ಕೂಟವನ್ನು ನಿಲ್ಲಿಸಲಾಯಿತು. ಮತ್ತೆ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು ೧೮೫೯ರಲ್ಲಿ. ಇವಾಂಜೆಲಾಸ್ ಝಪ್ಪಾನ್ ಪ್ರಪ್ರಥಮವಾಗಿ ಒಲಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿ ಸಿದರು. ಬಳಿಕ ೧೮೯೪ರಲ್ಲಿ ಫ್ರಾನ್ಸ್ನ ಪಿಯರೆ ಡಿ ಕ್ಯೂಬರ್ತಿನ್ ಅಂತರ ರಾಷ್ಟಿçÃಯ ಒಲಂಪಿಕ್ ಸಮಿತಿಯನ್ನು ಹುಟ್ಟುಹಾಕಿದರು. ೧೮೯೬ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಾಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಂಪಿಕ್ ಕ್ರೀಡಾಕೂಟ ಆಯೋ ಜಿಸಲಾಯಿತು. ಇದು ಮೊದಲ ಆಧುನಿಕ ಒಲಂಪಿಕ್ ಕ್ರೀಡಾಕೂಟ ವೆಂದು ಹೇಳಲಾಗುತ್ತಿದೆ.

ಒಲಂಪಿಕ್ ಚಿಹ್ನೆಗಳು

ಬಿಳಿಬಣ್ಣದ ಒಲಂಪಿಕ್ ಧ್ವಜದಲ್ಲಿ ಐದು ವರ್ತುಲಗಳು ಒಂದಕ್ಕೊAದು ಹೆಣೆದುಕೊಂಡಿರುತ್ತವೆ. ಕೆಂಪು, ನೀಲಿ, ಹಸಿರು, ಹಳದಿ ಹಾಗೂ ಕಪ್ಪು ಬಣ್ಣಗಳಿಂದ ಕೂಡಿರುತ್ತವೆ. ಈ ಐದು ವರ್ತುಲಗಳು ಜಗತ್ತಿನ ಐದು ಜನವಸತಿಯುಳ್ಳ ಭೂಖಂಡಗಳಾದ ಏಷ್ಯಾ, ಆಫ್ರಿಕಾ, ಆಸ್ಟೆçÃಲಿಯಾ, ಯುರೋಪ್ ಮತ್ತು ಅಮೇರಿಕಾಗಳನ್ನು ಪ್ರತಿನಿಧಿಸುತ್ತವೆ (ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ).

ಮೊದಲ ಒಲಂಪಿಕ್ ದಿನ

ಮೊದಲ ಅಂತರÀರಾಷ್ಟಿçÃಯ ಒಲಂಪಿಕ್ ದಿನವನ್ನು ಜೂನ್ ೨೩, ೧೯೪೮ ರಂದು ಆಚರಿಸಲಾಯಿತು. ಇದರಲ್ಲಿ ಪೋರ್ಚುಗಲ್, ಗ್ರೀಸ್, ಆಸ್ಟಿçÃಯಾ, ಕೆನಡಾ, ಸ್ವಿಟ್ಜರ್ಲೆಂಡ್, ಗ್ರೇಟ್ ಬ್ರಿಟನ್, ಉರುಗ್ವೆ, ವೆನೆಜುವೆಲಾ ಮತ್ತು ಬೆಲ್ಜಿಯಂ ಸೇರಿ ಒಟ್ಟು ಒಂಭತ್ತು ದೇಶಗಳು ಮೊದಲ ಬಾರಿಗೆ ಈ ಒಲಂಪಿಕ್ ದಿನಾಚರಣೆ ಯಲ್ಲಿ ಭಾಗವಹಿಸಿದ್ದವು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಂದಿನ ಐಒಸಿ ಅಧ್ಯಕ್ಷ ಸಿಗ್ಛಿಡ್ ಎಡ್ಸಾಟ್ರಾಮ್ ಮಾತನಾಡಿದ್ದರು.

ಒಲಂಪಿಕ್‌ನಲ್ಲಿ ಭಾರತದ ಆರಂಭ

ಒಲAಪಿಕ್ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾರತ ಭಾಗವಹಿಸಿದ್ದು ೯೦೦ರ ಪ್ಯಾರೀಸ್ ಒಲಂಪಿಕ್ಸ್ನಲ್ಲಿ. ಪ್ಯಾರಿಸ್‌ನಲ್ಲಿ ರಜೆ ಕಳೆಯಲೆಂದು ತೆರಳಿದ್ದ ಆಂಗ್ಲೋ-ಇAಡಿಯನ್ ಅಥ್ಲಿಟ್ ನಾರ್ಮನ್ ಪಿಚರ್ಡ್ ಭಾರತವನ್ನು ಪ್ರತಿನಿಧಿಸಿ ೨೦೦ ಮೀ. ಓಟ ಮತ್ತು ೨೦೦ ಮೀ. ಹರ್ಡಲ್ಸ್ನಲ್ಲಿ ಚಿನ್ನ ಗೆದ್ದಿದ್ದರು. ಬಳಿಕ ೧೯೨೦ರಲ್ಲಿ ಬೆಲ್ಜಿಯಂನ ಎಂಟ್ ವರ್ಪ್ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಇಬ್ಬರು ಹಾಗೂ ೧೯೨೪ರ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಎಂಟು ಮಂದಿಯ ತಂಡ ಭಾಗವಹಿಸಿತ್ತು. ೧೯೨೮ರಲ್ಲಿ ನೆದರ್ಲೆಂಡ್‌ನ ಆಮ್‌ಸ್ಟರ್‌ಡಂ ಒಲಂಪಿಕ್ ಕ್ರೀಡಾಕೂಟ ನಡೆಯುವ ವೇಳೆ ಭಾರತೀಯ ಒಲಂಪಿಕ್ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಭಾರತದ ಅಧಿಕೃತ ಕ್ರೀಡಾತಂಡ ಪ್ರತಿನಿಧಿಸಿ ಮೊದಲ ಬಾರಿ ಗೆದ್ದು ಚಿನ್ನ (ಹಾಕಿ) ತಂದಿತ್ತು.

ಒಲAಪಿಕ್‌ನಲ್ಲಿ ಭಾರತ ಗೆದ್ದ ಪದಕ ಪಟ್ಟಿ

ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತವು ಒಟ್ಟು ೩೫ ಪದಕವನ್ನು ಪಡೆದುಕೊಂಡಿದೆ. ಇದರಲ್ಲಿ ೧೦ ಬಂಗಾರದ ಪದಕ, ೯ ಬೆಳ್ಳಿ ಪದಕ, ೧೬ ಕಂಚಿನ ಪದಕ ಸೇರಿ ಒಟ್ಟು ೩೫ ಪದಕವನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ೨೦೨೦ರ ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರ ತವು ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದೆ.

? ಕುಡೆಕಲ್ ಸಂತೋಷ್