ಮಡಿಕೇರಿ, ಜೂ. ೨೨: ರಾಜಾ ಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜಾಸೀಟು, ರಾಜರ ಗದ್ದುಗೆ, ನೆಹರು ಮಂಟಪ ಅಭಿವೃದ್ಧಿ ಸಂಬA ಧಿಸಿದಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯಕ್ ಮಾಹಿತಿ ನೀಡಿದರು.

ರಾಜಾಸೀಟು ಅಭಿವೃದ್ಧಿ ಸಂಬAಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್ ಮಾಹಿತಿ ನೀಡಿದರು.

ರಾಜಾಸೀಟು ಅಭಿವೃದ್ಧಿ ಸಂಬAಧಿಸಿದAತೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿಗಳು ರಾಜಸೀಟು, ರಾಜರ ಗದ್ದುಗೆ, ನೆಹರು ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಹೊಸ ಕ್ರಿಯಾಯೋಜನೆಗೆ ಅನುಮೋದಿ ಸಲಾಗುವುದು. ಯಾವ ಉದ್ದೇಶಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳ ಲಾಗುತ್ತದೆ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ರಾಜಸೀಟಿನ ಪುಟಾಣಿ ರೈಲು ಭಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗಡಿ ಮಳಿಗೆ ಯೋಜನೆ ಬಗ್ಗೆ ಮಾಹಿತಿ ಪಡೆದ ಅವರು ತಾತ್ಕಾಲಿಕ ಮಳಿಗೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಂಬAಧಪಟ್ಟ ಎಂಜಿನಿಯರ್‌ಗೆ ಸಲಹೆ ಮಾಡಿದರು.

ಗ್ರೇಟರ್ ರಾಜಸೀಟು ಕಾಮಗಾರಿ ಪ್ರಗತಿ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ಧೇಗೌಡ ಮಾಹಿತಿ ನೀಡಿದರು. ಕೂರ್ಗ್ ವಿಲೇಜ್ ಯೋಜನೆ ಬಗ್ಗೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ವಿವರಿಸಿದರು.

ಕಳೆದ ವರ್ಷದ ವಾರ್ಷಿಕ ಆದಾಯದ ಮತ್ತು ಖರ್ಚಿನ ವಿವರ, ರಾಜಸೀಟು ಉದ್ಯಾನದಲ್ಲಿ ಕೈಗೊಳ್ಳುವ ಕಾಮಗಾರಿ ಸಂಬAಧಿಸಿದAತೆ ಪ್ರಮೋದ್ ಮಾಹಿತಿ ನೀಡಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಬಾನಾ ಎಂ.ಶೇಕ್, ನಗರಸಭೆ ಪೌರಾಯುಕ್ತರಾದ ವಿಜಯ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಜತಿನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುತ್ತಪ್ಪ ಇತರರು ಇದ್ದರು.