ಮಡಿಕೇರಿ, ಜೂ. ೧೮: ನಗರದ ಗೌಡ ಸಮಾಜ ಸಮೀಪದ ಮನೆಗೆ ಹೊಂದಿಕೊAಡಿರುವ ಬರೆ ಕುಸಿಯುವ ಆತಂಕ ಎದುರಾಗಿದ್ದು, ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ರಕ್ಷಣಾ ಕಾಮಗಾರಿ ನಡೆದಿಲ್ಲ. ಈ ಸಂಬAಧ ಅಗತ್ಯ ಕ್ರಮವಹಿಸುವಂತೆ ಮನೆ ಮಾಲೀಕ ಕೆ.ಎಸ್. ರಾಮಕೃಷ್ಣ ಆಗ್ರಹಿಸಿದ್ದಾರೆ.
ಮಡಿಕೇರಿಯ ವಾರ್ಡ್ ೨೩ ರ ಗೌಡ ಸಮಾಜದ ಸಮೀಪದಲ್ಲಿರುವ ಬರೆಯನ್ನು ಸಮಾಜದವರು ೫೦ ಅಡಿ ಆಳದ ತನಕ ಕೊರೆದು ಸಮತಟ್ಟು ಮಾಡಿ ತಡೆಗೋಡೆ ನಿರ್ಮಿಸದ ಪರಿಣಾಮ ಮನೆಯ ಅಡಿಪಾಯ ಶಿಥಿಲಗೊಂಡು ಕುಸಿಯುವ ಸಾಧ್ಯತೆ ಇದೆ. ಮನೆಯಲ್ಲಿ ವಾಸಿಸುವವರಿಗೆ ಇದರಿಂದ ಪ್ರಾಣ ಭಯವೂ ಕಾಡುತ್ತಿದೆ. ಈ ಬಗ್ಗೆ ೨೦೧೯ ರಿಂದ ನಿರಂತರ ಮನವಿಯನ್ನು ಸಲ್ಲಿಸುತ್ತ್ತಾ ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ೨೦೧೯ರಲ್ಲಿ ಈ ಸಂಬAಧ ಸ್ಥಳ ಪರಿಶೀಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗಿತ್ತು. ಆದರೆ, ನಗರಸಭೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ರಾಮಕೃಷ್ಣ ಅವರು ಆರೋಪಿಸಿದ್ದಾರೆ.
-ಟಿ.ಜಿ. ಸತೀಶ್