ಚೆಯ್ಯಂಡಾಣೆ, ಜೂ. ೧೮: ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೩ ವರ್ಷಗಳ ಕಾಲ ಸೇವೆ ಸಲ್ಲಿಸಿ ಮಂಡ್ಯ ಜಿಲ್ಲೆಗೆ ಪದೋನ್ನತಿ ಹೊಂದಿ ವರ್ಗಾವಣೆ ಯಾದ ಫಾರ್ಮಸಿ ಅಧಿಕಾರಿ ಪ್ರಸನ್ನ ಕುಮಾರಿ ಎಂ.ಟಿ. ಅವರಿಗೆ ಚೆಯ್ಯಂ ಡಾಣೆ ಆಯೋಗ್ಯ ಕೇಂದ್ರದ ವತಿ ಯಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಉತ್ತಪ್ಪ ಭರತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ವರ್ಗಾವಣೆಯಾದ ಪ್ರಸನ್ನ ಕುಮಾರಿ ಅವರ ಕಾರ್ಯವೈಖರಿಯನ್ನು ಶ್ಲಾಘಿ ಸಿದರು. ಲ್ಯಾಬ್ ಟೆಕ್ನಿಷಿಯನ್ ಲೀಲಾವತಿ ಮಾತನಾಡಿ, ೧೩ ವರ್ಷ ಗಳ ಕಾಲ ಸೇವೆ ಸಲ್ಲಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಕಿರಿಯ ಪ್ರಾಯದಲ್ಲಿಯೇ ಪದೋನ್ನತಿ ಹೊಂದಿ ವರ್ಗಾವಣೆಯಾಗುತ್ತಿ ರುವುದು ಪ್ರಶಂಸನೀಯ ಎಂದರು.
ಆರೋಗ್ಯ ಕೇಂದ್ರದ ಕನಕಾವತಿ, ಮಂಜುಳಾ, ಸಿಹೆಚ್‌ಓ ಭವ್ಯ, ಆಶಾ ಕಾರ್ಯಕರ್ತೆ ಜಮುನಾ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭ ನಿವೃತ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಹೇಮಾವತಿ, ಆಶಾ ಕಾರ್ಯ ಕರ್ತೆಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.