ಮಡಿಕೇರಿ, ಜೂ. ೧೩ : ನಾಗರಹೊಳೆ ವನ್ಯಜೀವಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಅರಣ್ಯ ಇಲಾಖೆಯೊಂದಿಗೆ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಪಣತೊಟ್ಟಿದೆ. ನಾಗರಹೊಳೆ ವ್ಯಾಪ್ತಿ ಪ್ರವೇಶ ದ್ವಾರಗಳಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ೪ ಕಡೆ ಕಸದ ಬುಟ್ಟಿಯನ್ನು ಇರಿಸಿ ದಾರಿಹೋಕರು ಇಲ್ಲಿ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಈ ಬುಟ್ಟಿಗಳಿಗೆ ಹಾಕುವಂತೆ ಫಲಕಗಳನ್ನು ಅಳವಡಿಸಲಾಗಿದೆ. ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿಯೂ ಮುಂಬರುವ ದಿನಗಳಲ್ಲಿ ಬುಟ್ಟಿಗಳನ್ನು ಇರಿಸಲಾಗುವುದಾಗಿ ಸಂಘಟನೆಯ ಪ್ರಮುಖರು ಮಾಹಿತಿ ನೀಡಿದ್ದಾರೆ. ವಾರಾಂತ್ಯ ಸೇರಿದಂತೆ ಇತರ ದಿನಗಳಲ್ಲಿಯೂ ಕೂಡ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಾಗ ಇಲಾಖೆಯೊಂದಿಗೆ ಸಿ.ಡಬ್ಲ್ಯೂ.ಎಸ್ ಕೂಡ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ವೇಳೆ ಕೈ ಜೋಡಿಸಿ ಪ್ಲಾಸ್ಟಿಕ್ ಮುಕ್ತ ನಾಗರಹೊಳೆ ವ್ಯಾಪ್ತಿಗೆ ಪಣ ತೊಡಲಿದೆ