ಗೋಣಿಕೊಪ್ಪಲು, ಜೂ.೭: ಕ್ರೀಡೆಯ ತವರೂರು ಎನಿಸಿ ಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಟರ್ಫ್ ಮೈದಾನಗಳು ಇನ್ನಷ್ಟು ಹೆಚ್ಚಾಗ ಬೇಕೆಂದು ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಹಾಕಿ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದ ಇವರು ಕೊಡಗಿನಲ್ಲಿ ಕ್ರೀಡೆಗೆ ತನ್ನದೇ ಆದ ವಿಶೇಷತೆಯಿದ್ದು, ಪ್ರತಿ ಮನೆಯಲ್ಲಿಯೂ ಕ್ರೀಡಾಪಟುಗಳು ಇದ್ದಾರೆ.

ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಮೈದಾನದ ಅವಶ್ಯಕತೆ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಟರ್ಫ್ ಮೈದಾನದಲ್ಲಿ ಅಭ್ಯಾಸ ನಡೆಸಬೇಕಾಗಿದೆ. ಹಾಕಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಜಿಲ್ಲೆಯ ವಿವಿಧ ಭಾಗದಲ್ಲಿ ಮತ್ತಷ್ಟು ಟರ್ಫ್ ಮೈದಾನಗಳು ನಿರ್ಮಾಣವಾಗಬೇಕು. ಇದರಿಂದ ಸ್ಥಳೀಯವಾಗಿ ಕ್ರೀಡಾಪಟು ಗಳಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿದೆ.

ಕಾಲೇಜು ಹಂತದಲ್ಲಿ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವುದ ರಿಂದ ಕ್ರೀಡಾಪಟುಗಳ ಕೌಶಲ್ಯ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಕ್ರೀಡೆಗಳು ನಡೆಯುತ್ತಿರುವುದು ಆಶಾದಾಯದ ಬೆಳವಣಿಗೆ. ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್.ಶಂಕರ್ ನಾರಾಯಣ, ದೈಹಿಕ ನಿರ್ದೇಶಕ ಕೆ.ಎಸ್.ತಮ್ಮಯ್ಯ, ಯುನಿವರ್ಸಿಟಿ ಪರಿವೀಕ್ಷಕರಾದ ಕಂಬಿರAಡ ರಾಕಿ ಪೂವಣ್ಣ ಸಲಹೆಗಾರ ಉಪನ್ಯಾಸಕರಾದ ಸಾಲ್ಡಾನ, ಶಿಕ್ಷಕರಾದ ಸಿ.ಪಿ.ನಿರ್ಮಿತ ಪ್ರಾರ್ಥಿಸಿ ವಿದ್ಯಾರ್ಥಿ ಪೂವಮ್ಮ ಬಿ.ಬಿ. ನೀರೂಪಿಸಿ, ವಂದಿಸಿದರು. ಅಂತರ ಕಾಲೇಜಿನ ೧೩ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.

೫ ತಂಡಗಳು ಸೆಮಿಫೈನಲ್ಸ್ಗೆ : ವೀರಾಜಪೇಟೆ ಕಾವೇರಿ ಕಾಲೇಜು ಮತ್ತು ಮಂಗಳೂರು ಯೂನಿವರ್ಸಿಟಿ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಹಾಕಿ ಟೂರ್ನಿಯಲ್ಲಿ ಐದು ತಂಡಗಳು ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡವು.

ಪುರುಷರ ವಿಭಾಗದಲ್ಲಿ ಗೋಣಿಕೊಪ್ಪ ಮತ್ತು ವೀರಾಜಪೇಟೆ ಕಾವೇರಿ ಕಾಲೇಜು, ಮೂರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಎಫ್‌ಎಂಕೆಎAಸಿ, ಮಹಿಳೆಯರಲ್ಲಿ ವೀರಾಜಪೇಟೆ ಕಾವೇರಿ ಗೆಲುವು ದಾಖಲಿಸಿದವು.

ಫಲಿತಾಂಶ : ಮಹಿಳೆ ವಿಭಾಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ವೀರಾಜಪೇಟೆ ಕಾವೇರಿ ಕಾಲೇಜು ತಂಡವನ್ನು ೨-೦ ಗೋಲುಗಳಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. ಗೋಣಿಕೊಪ್ಪ ಪರ ಪಡಿಕಲ್ ಕೃತಿ, ಪಿ.ಜಿ ವರ್ಷಾ ತಲಾ ಒಂದೊAದು ಗೋಲು ಬಾರಿಸಿ, ಗೆಲುವಿನ ರೂವಾರಿಯಾದರು.

ಪುರುಷರ ವಿಭಾಗ ; ಮೂರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ೪-೦ ಗೋಲುಗಳಿಂದ ಸೋಲಿಸಿತು. ಮೂರ್ನಾಡು ತಂಡದ ವಿನಿಲ್ ಮಂದಣ್ಣ ೩ ಗೋಲು ಹೊಡೆದು ಮಿಂಚು ಹರಿಸಿದರು. ಎಂ. ಬಿ. ದೇವಯ್ಯ ೧ ಗೋಲು ಬಾರಿಸಿ ಗೆಲುವಿನ ಅಂತರ ಹಿಗ್ಗಿಸಿದರು.

ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ವೀರಾಜಪೇಟೆ ಸೆಂಟ್ ಆನ್ಸ್ ವಿರುದ್ಧ ೪-೦ ಗೋಲುಗಳ ಅಂತರದಲ್ಲಿ ಗೆಲುವು ಪಡೆದುಕೊಂಡಿತು. ಗೋಣಿಕೊಪ್ಪ ಪರ ಜಗತ್, ವಿನಿತ್ ನಾಣಯ್ಯ, ನಿರಂಜನ್, ಕಾವೇರಪ್ಪ ತಲಾ ಒಂದೊAದು ಗೋಲು ಹೊಡೆದು ಮಿಂಚಿದರು. ಸೆಂಟ್ ಆನ್ಸ್ ಗೋಲು ದಾಖಲಿಸಲಾಗದೆ ನಿರಾಸೆ ಅನುಭವಿಸಿತು.

ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಪುತ್ತೂರು ಸೆಂಟ್ ಫಿಲೋಮಿನಾಸ್ ವಿರುದ್ಧ ೬-೦ ಗೋಲುಗಳ ಭರ್ಜರಿ ಗೆಲುವು ಪಡೆದುಕೊಂಡಿತು. ಎಂ. ಕೆ. ಮುತ್ತಪ್ಪ ೩ ಗೋಲು ಹೊಡೆದು ಸಂಭ್ರಮಿಸಿದರು. ಎಂ. ಸಿ. ಮುತ್ತಪ್ಪ, ಮಹೇಶ್, ಚಿರಣ್ ತಲಾ ಒಂದೊAದು ಗೋಲು ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಮಡಿಕೇರಿ ಎಫ್‌ಎಂಕೆಎAಸಿ ತಂಡವು ಮಂಗಳೂರು ಸೆಂಟ್ ಅಲೋಸಿಯಸ್ ವಿರುದ್ಧ ೭-೦ ಗೋಲುಗಳ ಅಮೋಘ ಗೆಲುವು ದಾಖಲಿಸಿತು. ಗೌರವ್ ೩, ಸುಗುನ್ ೨, ಪೆಮ್ಮಯ್ಯ, ಪ್ರಜ್ವಲ್, ನಾಣಯ್ಯ ತಲಾ ಒಂದೊAದು ಗೋಲು ಬಾರಿಸಿದರು.