ಚೆಯ್ಯಂಡಾಣೆ, ಜೂ. ೭: ಸಹೊದ್ಯೋಗಿಗಳೊಂದಿಗೆ ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ ಕೇರಳ ಮೂಲದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ಬುಧವಾರ ನಡೆದಿದೆ. ಕೇರಳದ ಕಣ್ಣೂರು ಜಿಲ್ಲೆಯ ಆಲಕ್ಕೋಡು ನಿವಾಸಿ ಅಪ್ಪು ಶ್ರೀಜೇಶ್ (೩೪) ಮೃತ ದುರ್ದೈವಿ.
ನಾಪೋಕ್ಲು ಸಮೀಪದ ಹಳೆ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿAದ ಸಹೊದ್ಯೋಗಿಗಳೊಂದಿಗೆ ಕಟ್ಟಡ ಕಾಮಗಾರಿ ಕೆಲಸಕ್ಕೆಂದು ಕೇರಳದ ಕಣ್ಣೂರಿನಿಂದ ಬಂದಿದ್ದ ಅಪ್ಪು ಶ್ರೀಜೇಶ್ ಬುಧವಾರ ಮಧ್ಯಾಹ್ನ ತನ್ನ ಮೂರು ಜನ ಸಹೋದ್ಯೋಗಿಗಳಾದ ಮೋಹನ್, ವಿಜು, ಸುನಿಲ್, ಎಂಬುವರೊAದಿಗೆ ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆರಿಯಪರಂಬು ಗ್ರಾಮದಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಎಎಸ್‌ಐ ಗೋಪಾಲಕೃಷ್ಣ, ಸಿಬ್ಬಂದಿಗಳಾದ ರವಿಕುಮಾರ್, ಶರತ್, ಲವ ಕುಮಾರ್, ಶರೀಫ್, ಪ್ರಸನ್ನ, ಗಣೇಶ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೀರಿನಲ್ಲಿ ಮುಳುಗಿದ್ದ ಮೃತ ದೇಹವನ್ನು ನಾಪೋಕ್ಲು ವಾಹನ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಸ್ಥಳೀಯರಾದ, ಅನೀಫ, ಕರೀಮ್, ರಜಾಕ್ ಒಂದು ಗಂಟೆಯ ಕಾಲ ಹುಡುಕಾಟ ನಡೆಸಿ ಮೃತ ದೇಹವನ್ನು ಮೇಲೆತ್ತಿದರು.
-ಅಶ್ರಫ್