ಪೊನ್ನAಪೇಟೆ, ಜೂ.೧: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೫ಎ ಸೈಡ್ ಸೌತ್ ಝೋನ್ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ಆತಿಥೇಯ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿರುದ್ಧ ೫-೦ ಗೋಲುಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ವಿನ್ನರ್ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತು. ಫೈನಲ್ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಗೋಣಿಕೊಪ್ಪಲು ಕಾವೇರಿ ಕಾಲೇಜು ಗೋಲುಗಳಿಸಲು ಸಾಧ್ಯವಾಗದೆ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ವಿಜೇತ ತಂಡದ ಪರ ರಂಗ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದರೆ, ರಾಶಿದ್ ಮತ್ತು ಅಜಿತ್ ತಲಾ ಒಂದೊAದು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ವಿರುದ್ಧ ೪-೧ ಗೋಲುಗಳ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರು ಸೇಕ್ರೆಡ್ ಹಾರ್ಟ್ ಕಾಲೇಜು ವಿರುದ್ಧ ಗೋಣಿಕೊಪ್ಪಲು ಕಾವೇರಿ ಕಾಲೇಜು ೪-೨ ಗೋಲುಗಳಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.

ಮ್ಯಾನ್ ಆಫ್ ದ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಮಡಿಕೇರಿ ಎಫ್‌ಎಂಕೆಎAಸಿ

(ಮೊದಲ ಪುಟದಿಂದ) ಕಾಲೇಜಿನ ರಂಗ, ಬೆಸ್ಟ್ ಗೋಲ್ ಕೀಪರ್ ಆಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿಜಾಮುದ್ದಿನ್, ಬೆಸ್ಟ್ ಡಿಫೆಂಡರ್ ಆಗಿ ಎಫ್‌ಎಂಕೆಎAಸಿ ಕಾಲೇಜಿನ ರಾಶಿದ್, ಬೆಸ್ಟ್ ಸ್ಟೆçöÊಕರ್ ಆಫ್ ಟೂರ್ನಮೆಂಟ್ ಆಗಿ ಗೋಣಿ ಕೊಪ್ಪಲು ಕಾವೇರಿ ಕಾಲೇಜಿನ ಸುಹೈಲ್ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ: ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ.ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಟ್ರೋಫಿ ದಾನಿಗಳಾದ ಗೋಣಿಕೊಪ್ಪಲಿನ ಮೀನು ವ್ಯಾಪಾರಿ ಉಂಬೈ, ಪ್ರೊಟೆಕ್ ಪಿವಿಸಿ ಲಿಮಿಟೆಡ್‌ನ ನಿರ್ದೇಶಕ ಅಳಮೇಂಗಡ ಬೆವನ್ ಬೋಪಣ್ಣ, ಗೋಣಿಕೊಪ್ಪಲು ಬುಲ್ಸ್ ಕಿಂಗ್‌ಡA ಜಿಮ್ ವ್ಯವಸ್ಥಾಪಕರಾದ ಬಬಿನ್ ಮತ್ತು ಗಗನ್, ಉಪ ಪ್ರಾಂಶುಪಾಲೆ ಡಾ. ಎ.ಎಸ್.ಪೂವಮ್ಮ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ನಯನ ತಮ್ಮಯ್ಯ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್, ವಿದ್ಯಾರ್ಥಿ ಕ್ಷೇಮಾ ಭಿವೃದ್ಧಿ ಸಂಘದ ಕ್ರೀಡಾ ಕಾರ್ಯದರ್ಶಿ ಅರ್ಷದ್, ಪಂದ್ಯಾ ವಳಿ ಆಯೋಜಕರಾದ ಮಹಮದ್ ಮಿಷಬ್ ಮತ್ತು ಮಹಮದ್ ನಿಹಾಲ್ ಇದ್ದರು.

ಪಂದ್ಯಾವಳಿಯ ತೀರ್ಪು ಗಾರರಾಗಿ ಅಶ್ವನ್, ಅಜಯ್, ಅರುಣ್ ಮತ್ತು ಜಿತಿನ್ ಕಾರ್ಯಪ್ಪ ಕಾರ್ಯನಿರ್ವಹಿಸಿದರು. ಅಶ್ವದಿ ಮತ್ತು ಅಫಿಫ್ ವೀಕ್ಷಕ ವಿವರಣೆ ನೀಡಿದರು.

ಪಟ್ಟಣದಲ್ಲಿ ಕಣ್ಣೂರು ಜಾಮಿಯಾ ಕಾಲೇಜು, ಬೆಂಗಳೂರು ಸೆಂಟ್ ಪ್ರಾಂನ್ಸಿಸ್, ಮೈಸೂರು ಹಿಂದೂಸ್ಥಾನ್ ಕಾಲೇಜು, ಮೈಸೂರು ಮೈಕಾ ಕಾಲೇಜು, ಸೆಂಟ್ ಫಿಲೋಸ್ ಮೈಸೂರು, ಮಂಗಳೂರು ಸೇಕ್ರೆಡ್ ಹಾರ್ಟ್ಸ್ ಕಾಲೇಜು ಎ ಮತ್ತು ಬಿ, ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ಎ ಮತ್ತು ಬಿ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಣ್ಣೂರು ಜಾಮಿಯಾ ಕಾಲೇಜು, ಬೆಂಗಳೂರು ಸೆಂಟ್ ಪ್ರಾಂನ್ಸಿಸ್, ಮೈಸೂರು ಹಿಂದೂಸ್ಥಾನ್ ಕಾಲೇಜು, ಮೈಸೂರು ಮೈಕಾ ಕಾಲೇಜು, ಸೆಂಟ್ ಫಿಲೋಸ್ ಮೈಸೂರು, ಮಂಗಳೂರು ಸೇಕ್ರೆಡ್ ಹಾರ್ಟ್ಸ್ ಕಾಲೇಜು ಎ ಮತ್ತು ಬಿ, ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ಎ ಮತ್ತು ಬಿ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಎ ಮತ್ತು ಬಿ, ವೀರಾಜಪೇಟೆ ಪ್ರಗತಿ ಪಿ.ಯು ಕಾಲೇಜು, ಪೊನ್ನಂಪೇಟೆ ಸರ್ಕಾರಿ ಪ.ಪೂ.ಕಾಲೇಜು, ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡ, ಗೋಣಿ ಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜು ಎ ಮತ್ತು ಬಿ, ಗೋಣಿ ಕೊಪ್ಪಲು ಕಾವೇರಿ ಕಾಲೇಜು ಎ, ಬಿ ಮತ್ತು ಸಿ, ಗೋಣಿಕೊಪ್ಪಲು ಹಾಕಿ ಕಾವೇರಿ ಸೇರಿದಂತೆ ಕಾಲೇಜು ತಂಡಗಳು ಭಾಗವಹಿಸಿದ್ದವು. -ಚೆನ್ನನಾಯಕ