ಮಡಿಕೇರಿ, ಜೂ. ೧: ನಮೀಬಿಯಾದಲ್ಲಿ ಅಲ್ಲಿನ ರಾಷ್ಟಿçÃಯ ತಂಡದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕ ತಂಡ ಪಾಲ್ಗೊಳ್ಳುತ್ತಿದೆ. ತಾ. ೨ ರಿಂದ ರಾಷ್ಟçದ ರಾಜಧಾನಿ ವಿಂಡ್‌ಹೋಕ್‌ನಲ್ಲಿ ಈ ಕ್ರಿಕೆಟ್ ಪಂದ್ಯಾವಳಿ ಜರುಗಲಿದ್ದು, ಕರ್ನಾಟಕ ತಂಡದಲ್ಲಿ ಕೊಡಗಿನ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಈಗಾಗಲೇ ರಣಜಿ ಸೇರಿದಂತೆ ವಿವಿಧ ರಾಷ್ಟಿçÃಯ ಪಂದ್ಯಾವಳಿಯಲ್ಲಿ ಗಮನ ಸೆಳೆದು ಐಪಿಎಲ್‌ನಲ್ಲಿ
ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿದ್ದ ಮಾಚಿಮಾಡ ವಿದ್ವತ್
ಕಾವೇರಪ್ಪ, ಕಳೆದ ಬಾರಿಯ ಕೆಪಿಎಲ್ ಪಂದ್ಯಾವಳಿಯಲ್ಲಿ ಆಡಿದ್ದ
ಸುಳ್ಯಕೋಡಿ ರಿಷಿಬೋಪಣ್ಣ ಹಾಗೂ ಮತ್ತೋರ್ವ (ಮೊದಲ ಪುಟದಿಂದ) ಯುವ ಆಟಗಾರರಾಗಿ ಅಪ್ಪನೆರವಂಡ ಲೋಚನ್ ಅಪ್ಪಣ್ಣ ಕರ್ನಾಟಕ ತಂಡದೊAದಿಗೆ ನಮೀಬಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಕರ್ನಾಟಕ ತಂಡ ಇಲ್ಲಿ ಐದು ಏಕದಿನ ಪಂದ್ಯವನ್ನಾಡಲಿದ್ದು, ಆರ್. ಸಮರ್ದ್ ತಂಡದ ನಾಯಕರಾಗಿದ್ದಾರೆ.
ಈ ಹಿಂದೆ ೨೫ ವರ್ಷ ಹಾಗೂ ೧೯ ವರ್ಷದೊಳಗಿನ ತಂಡದಲ್ಲಿ ಆಡಿರುವ ಆಟಗಾರರ ಸಾಧನೆಯಂತೆ ತಂಡವನ್ನು ಆರಿಸಲಾಗಿದೆ. ವಿದ್ವತ್ ಕಾವೇರಪ್ಪ, ಬೆಕ್ಕಸೊಡ್ಲೂರಿನವರಾದ ಮಾಚಿಮಾಡ ದೇವಾನಂದ್ ಹಾಗೂ ದಿವಂಗತ ಬೀನಾ ದಂಪತಿಯ ಪುತ್ರ. ರಿಷಿ ಬೋಪಣ್ಣ ಮೂಲತಃ ಚೆಟ್ಟಿಮಾನಿಯವರಾದ ಬೆಂಗಳೂರಿನಲ್ಲಿ ವಕೀಲರಾಗಿರುವ ಸುಳ್ಯಕೋಡಿ ಅಮರ್‌ನಾಥ್ ಹಾಗೂ ವೈಶಾಲಿ ದಂಪತಿಯ ಪುತ್ರರಾಗಿದ್ದಾರೆ. ಲೋಚನ್ ಅಪ್ಪಣ್ಣ ಮೂಲತಃ ಕಿರುಂದಾಡುವಿನವರಾದ ಬೆಂಗಳೂರಿನಲ್ಲಿ ನೆಲೆಸಿರುವ ಅಪ್ಪನೆರವಂಡ ಅಪ್ಪಣ್ಣ ಹಾಗೂ ಬವಿತ ಕಾವೇರಮ್ಮ ದಂಪತಿಯ ಪುತ್ರ. ಕರ್ನಾಟಕ ತಂಡ ತಾ. ೨ ರಂದು (ಇಂದು) ಪ್ರಥಮ ಪಂದ್ಯವನ್ನಾಡಲಿದೆ. -ಶಶಿ