(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪ. ಜೂ.೧: ಮಳೆಗಾಲ ಆರಂಭವಾಗುತ್ತಿ ದ್ದಂತೆಯೇ ಇದೀಗ ದ.ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದೆ. ಸಂಜೆಯ ಹಾಗೂ ಮುಂಜಾನೆ ವೇಳೆ ಕಾಫಿ ತೋಟದ ಸಮೀ ಪವಿರುವ ರೈತರ, ಬೆಳೆಗಾರರ ಮನೆಯ ಬಳಿಗೆ ತೆರಳಿ ಕೊಟ್ಟಿಗೆ ಯಲ್ಲಿ ಕಟ್ಟಿ ಹಾಕಿರುವ ಬೆಲೆ ಬಾಳುವ ಹಸುಗಳನ್ನು ಒಂದೊAದಾಗಿಯೇ ಬಲಿ ತೆಗೆದುಕೊಳ್ಳುತ್ತಿವೆ.
ವಿಶೇಷವಾಗಿ ಮಳೆ ಬಿದ್ದ ಪರಿಣಾಮ ಕಾಫಿ ತೋಟದಲ್ಲಿ ಕಾಫಿ ಸೇರಿದಂತೆ ಇನ್ನಿತರ ಗಿಡಗಳಿಗೆ ರಸಗೊಬ್ಬರವನ್ನು ನೀಡುವ ಕೆಲಸ ಬರದಿಂದ ಸಾಗುತ್ತಿದೆ. ಕಾರ್ಮಿಕರು ಮುಂಜಾನೆಯಿAದಲೇ ಕಾಫಿ ತೋಟದಲ್ಲಿ ತಮ್ಮ ಕಾಯಕವನ್ನು ಆರಂಭಿಸುತ್ತಿದ್ದಾರೆ. ಆದರೆ ಅಲ್ಲಲ್ಲಿ ಹುಲಿಯ ಸಂಚಾರ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಹಜ ವಾಗಿಯೇ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾಫಿ ತೋಟವನ್ನು ನಂಬಿರುವ ಬೆಳೆ ಗಾರರು ಹಾಗೂ ರೈತರು ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ.
ಈಗಾಗಲೇ ರೈತರು ತಮ್ಮ ತೋಟಕ್ಕೆ ಬೇಕಾದ ರಸ ಗೊಬ್ಬರಗಳನ್ನು ಸಮೀಪದ ಕೃಷಿ ಪತ್ತಿನ ಸಹಕಾರ ಸಂಘದಿAದ ಖರೀದಿಸಿ ತಮ್ಮ ತಮ್ಮ ಗೋದಾ ಮುಗಳಲ್ಲಿ ಸಂಗ್ರಹಿಸಿಟ್ಟಿ ದ್ದಾರೆ.
(ಮೊದಲ ಪುಟದಿಂದ) ಮಳೆ ಆರಂಭವಾಗಿರುವುದರಿAದ ಗಿಡ ಗಳಿಗೆ ಗೊಬ್ಬರವನ್ನು ನೀಡ ಲೇಬೇಕಾದ ಅನಿವಾರ್ಯತೆಯಿದೆ. ಆದರೆ ಕಾರ್ಮಿಕರ ಕೊರತೆಯಿಂದ ನಿಗಧಿತ ಸಮಯದಲ್ಲಿ ಗೊಬ್ಬರ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಂದಿನ ಕಾಫಿ ಹಾಗೂ ಕರಿಮೆಣಸಿನ ಇಳುವರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ.
ಇದೀಗ ಹುಲಿಗಳು ಮತ್ತೆ ಕಾಣಿಸಿಕೊಂಡಿರುವುದರಿAದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಕಾಫಿ ಬೆಳೆಗಾರರಿಗೆ ನಿದ್ದೆಗೆಟ್ಟಿದೆ. ರೈತ ಹಾಗೂ ಬೆಳೆಗಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ಪ್ರಮುಖವಾಗಿ ರೈತರ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಿದೆ. ಕಳೆದ ಎರಡು ತಿಂಗಳಿನಿAದ ದ.ಕೊಡಗಿನ ವಿವಿಧ ಭಾಗದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆದಿದೆ.
ಅರಣ್ಯ ಪ್ರದೇಶದಿಂದ ಇದೀಗ ಮತ್ತೆ ನಾಡಿನತ್ತ ಆಗಮಿಸಿರುವ ಹುಲಿಯು ಬಲ್ಯಮಂಡೂರು ಗ್ರಾಮದ ದೇಯಂಡ ಪಿ.ಬೆಳ್ಯಪ್ಪ ಎಂಬವರ ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ಇದರಿಂದ ಸುತ್ತ ಮುತ್ತಲಿನ ಗ್ರಾಮದಲ್ಲಿ ಹುಲಿಗಳ ಸಂಚಾರ ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ರಾತ್ರಿಯ ವೇಳೆ ಮಳೆ ಸುರಿಯುತ್ತಿರುವುದರಿಂದ ಹುಲಿಯು ಕೊಟ್ಟಿಗೆ ಬಳಿ ಬರುವುದನ್ನು ಅಂದಾಜಿಸಲಾಗುತ್ತಿಲ್ಲ. ರೈತರ ಜಾನುವಾರು ತಿಂದ ಸ್ಥಳದಲ್ಲಿ ಹುಲಿಯ ಸಂಚಾರವಿರುವ ಬಗ್ಗೆ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿಗಳು ಹುಲಿಯ ಸೆರೆಗೆ ಬೋನನ್ನು ಅಳವಡಿಸಿದ್ದಾರೆ. ಹುಲಿಯು ಬೋನಿಗೆ ಬೀಳದೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ನಿದ್ದೆಗೆಟ್ಟಿದೆ.
ಇತ್ತ ಬಹುತೇಕ ರೈತರ ಕಾಫಿ ತೋಟಗಳ ಹುಲಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ದ.ಕೊಡಗಿನ ವಿವಿಧ ಭಾಗಗಳ ರೈತರ ಕಾಫಿ ತೋಟಗಳ ಕೆಲವು ಹುಲಿಗಳು ಕಾಣಿಸಿಕೊಂಡಿದ್ದು, ಇವುಗಳ ನಿಖರತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ರೈತರ ತೋಟ ಹಾಗೂ ಮನೆಯ ಸಮೀಪ ಕಟ್ಟಿ ಹಾಕಲಾಗುತ್ತಿರುವ, ಕೊಟ್ಟಿಗೆಯಲ್ಲಿರುವ ಜಾನು ವಾರುಗಳನ್ನು ಬೇಟೆಯಾಡುತ್ತಿರುವ ಹುಲಿಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿವೆ. ಸಮೀಪದ ಅರಣ್ಯ ವ್ಯಾಪ್ತಿಯಿಂದ ಆಗಮಿಸಿರುವ ಹುಲಿಗಳು ದಿನನಿತ್ಯದ ಆಹಾರಕ್ಕಾಗಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಎರಗುತ್ತಿವೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಹಲವು ಹುಲಿಗಳು ರೈತರ ತೋಟಗಳತ್ತ ಹೆಜ್ಜೆ ಹಾಕಿದ್ದು ಈ ವೇಳೆ ಆಹಾರಕ್ಕಾಗಿ ಜಾನುವಾರುಗಳ ಮೇಲೆ ಎರಗು ತ್ತಿರುವುದಾಗಿ ತಿಳಿದು ಬಂದಿದೆ. ಈ ಭಾಗದಲ್ಲಿ ಹುಲಿಗಳ ಉಪಟಳ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಈಗಾಗಲೇ ಇಲಾಖೆಯು ಹಿರಿಯ ಅಧಿಕಾರಿ ಗಳಿಂದ ಅನುಮತಿ ಪಡೆದಿ ರುವುದಾಗಿ ಮಾಹಿತಿ ಲಭ್ಯವಾಗಿದೆ. ಬೋನಿನ ಒಳಗೆ, ಹುಲಿಯನ್ನು ಆಕರ್ಷಿಸಲು ಹಂದಿ ಮರಿ, ಆಡು ಮರಿಗಳನ್ನು ಕಟ್ಟಲಾಗುತ್ತಿದೆ.