ಕೂಡಿಗೆ, ಮೇ ೩೧: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಕಳೆದ ಆರು ತಿಂಗಳಿAದ ವಿವಿಧ ಕಾರಣದಿಂದಾಗಿ ನಡೆಯದೆ ತಾ. ೨೯ ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆರಂಭಗೊAಡಿತ್ತಾದರೂ ಸದಸ್ಯರುಗಳ ಆಕ್ಷೇಪದಿಂದಾಗಿ ಮೊಟಕುಗೊಂಡಿತು.
ಸಭೆ ಆರಂಭಗೊಳ್ಳುತಿದ್ದAತೆಯೇ ಸದಸ್ಯರಾದ ಟಿ.ಪಿ. ಹಮೀದ್, ಅರುಣ್ ರಾವ್, ಅನಂತ್, ಶಿವಕುಮಾರ ಸೇರಿದಂತೆ ಸರ್ವ ಸದಸ್ಯರು ಸಭೆಯ ಆಹ್ವಾನ ಪತ್ರವನ್ನು ಹಿಡಿದು ಪತ್ರದ ಕಾರ್ಯಕ್ರಮದ ಪಟ್ಟಿಯಂತೆ ಬಜೆಟ್ ಮಂಡನೆ ಮತ್ತು ಕಳೆದ ಮೂರು ತಿಂಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖರ್ಚು ಮಾಡಿದ ಹಣದ ಬಗ್ಗೆ ಅನು ಮೋದನೆ ಕೋರಲು ನೀಡಲಾಗಿದ್ದ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದರು.
ಕಳೆದ ಆರು ತಿಂಗಳಿAದ ಯಾವುದೇ ಮಾಸಿಕ ಸಭೆಗಳು ನಡೆಯದೆ, ಗ್ರಾಮದ ಅಭಿವೃದ್ಧಿ ಸಂಬAಧಿಸಿದAತೆ ವಾರ್ಷಿಕ ಬಜೆಟ್ ತಯಾರಿಸದೆ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಮನಬಂದAತೆ ಆರೂವರೆ ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ಮಾತ್ರ ಮಾಸಿಕ ಸಭೆಯಲ್ಲಿ ಒಪ್ಪಿಗೆಯನ್ನು ಕೇಳುತ್ತಿದ್ದೀರಾ.
ಆದರೆ ಕಳೆದ ಎಂಟು ತಿಂಗಳಿAದ ಕೈಗೊಂಡ ವಿವಿಧ ಕಾಮಗಾರಿಯನ್ನು ನಡೆಸಿದ ಗುತ್ತಿಗೆದಾರರಿಗೆ ನೀಡುವ ಚೆಕ್ಗೆ ಅಧ್ಯಕ್ಷರು ಸಹಿ ಮಾಡುತ್ತಿಲ್ಲ. ಅದಕ್ಕೆ ಸಂಬAಧಿಸಿದAತೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದರೂ ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಬಜೆಟ್ ಮಂಡಿಸದೆ ಹಣವನ್ನು ಖರ್ಚು ಮಾಡಿರುವುದಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ೮ ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮಳಿಗೆಗಳು ಮತ್ತು ಹೋಂಸ್ಟೇಗಳು ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಪರವಾನಗಿಯನ್ನು ತೆಗೆದುಕೊಳ್ಳದೆ ನಡೆಯುತ್ತಿರುವ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು. ಅವುಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಭೆಯಲ್ಲಿ ಒತ್ತಾಯ ಮಾಡಲಾಯಿತು.
ಸಭೆಯಲ್ಲಿ ಹಾಜರಿದ್ದ ಸದಸ್ಯರು, ಅಧ್ಯಕ್ಷರು ಕಳೆದ ಆರು ತಿಂಗಳಿAದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕಾರ್ಯ ಗತಗೊಳಿಸಲು ಸಹಕಾರ ನೀಡದೆ, ಮನಬಂದAತೆ ಉನ್ನತಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅದರಂತೆಯೇ ಪರಿಶೀಲನೆಯು ನಡೆದಿದೆ. ಆದರೆ ವಾರ್ಷಿಕ ಬಜೆಟ್ ತಯಾರಿಸದೆ, ಅಭಿವೃದ್ಧಿ ಕೆಲಸಗಳಿಗೆ ಹಣವನ್ನು ಕಾಯ್ದಿರಿಸದೆ, ಭುವನಗಿರಿ ಗ್ರಾಮದಲ್ಲಿ ಅಕ್ರಮ ಕಾಮಗಾರಿನಡೆದಿದೆ ಎಂಬ ವಿಷಯದ ನೆಪದಲ್ಲಿ ದೂರು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಳ್ಳುತ್ತಿವೆ ಎಂದು ಹಾಜರಿದ್ದ ಸದಸ್ಯರು ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದ ಪ್ರಸಂಗ ನಡೆಯಿತು.
ಸಭೆಯ ನಡಾವಳಿ ಪುಸ್ತಕದಲ್ಲಿ ಹಾಜರಿದ್ದ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮಾದರಿಯಲ್ಲಿ ನೋಂದಣಿ ಮಾಡಿದರು. ಅಧ್ಯಕ್ಷೆ ಮಂಗಳಾ ಪ್ರಕಾಶ್ ಕಾಮಗಾರಿ ಬಿಲ್ ವಿಷಯವನ್ನು ಬಿಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಪೂರಕವಾದ ಬಿಲ್ಗಳಿಗೆ ಸಹಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಹಾಜರಿದ್ದ ಸದಸ್ಯರಾದ ಟಿ.ಪಿ. ಹಮೀದ್, ಗಿರೀಶ್, ಶಿವಕುಮಾರ, ಅನಂತ, ಅರುಣ್ ರಾವ್, ಚಂದ್ರು, ರವಿ ಪಲ್ಲವಿ ಅವರು ವಾರ್ಷಿಕವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಸದ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸದೆ ಪಂಚಾಯಿತಿಗೆ ಬರುವ ವರಮಾನದಲ್ಲಿ ಕಡಿತವಾಗಿದೆ.
ವಾರ್ಷಿಕ ಹರಾಜು ಪ್ರಕ್ರಿಯೆ ಮತ್ತು ಲೈಸೆನ್ಸ್ ನೀಡುವ ವಿಚಾರದಲ್ಲಿ ಚರ್ಚೆಗಳು ನಡೆಯದೆ ಗ್ರಾಮ ಪಂಚಾಯಿತಿಗೆ ಆದಾಯ ಕಡಿತ ಉಂಟಾಗಿದೆ ಎಂದು ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಹೆಚ್.ಆರ್. ಚಂದ್ರು, ಲಕ್ಷಿö್ಮ, ಹೆಚ್.ಎಸ್. ರವಿ, ಪಲ್ಲವಿ, ಜಯಶೀಲ, ಅಭಿವೃದ್ಧಿ ಅಧಿಕಾರಿ ಅಂಜಲಾ ದೇವಿ, ಕಾರ್ಯದರ್ಶಿ ಪುನಿತ್ ಹಾಜರಿದ್ದರು.