ಮರಗೋಡು, ಮೇ ೩೧: ತಾ. ೨೯ ರಂದು ಸುರಿದ ಗಾಳಿ ಮಳೆಗೆ ಮರಗೋಡು ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಮರಗಳು ಧರೆಗುರುಳಿದ ಘಟನೆ ನಡೆದಿದೆ. ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲ ಸಮಯ ಮರಗೋಡು-ಕತ್ತಲೆಕಾಡು ಹಾಗೂ ಮರಗೋಡು-ಹಾಕತ್ತೂರು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಗಾಳಿಯ ರಭಸಕ್ಕೆ ಹೊಸ್ಕೇರಿ ಗ್ರಾಮದ ಕರ್ಣಯ್ಯನ ಚಂದ್ರ ಶೇಖರ್ ನಂದ ಎಂಬವರ ಮನೆ ಅನತಿ ದೂರದಲ್ಲಿದ್ದ ಬೃಹತ್ ಮರ ವೊಂದು ಬುಡಸಮೇತ ಬಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊAಡು ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದೇ ಗ್ರಾಮದ ತಳೂರು ಕುಶಾಲಪ್ಪ ಎಂಬವರ ಮನೆಗೆ ಕೂಡ ತೆಂಗಿನಮರ ಬಿದ್ದು ಹಾನಿ ಯಾಗಿದೆ ಹಾಗೂ ಗಾಳಿಯ ರಭಸಕ್ಕೆ ಇವರ ಗೋದಾಮಿನ ಶೀಟುಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ.