ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ ಸೋಲಿಸಬಹುದು: ರಾಹುಲ್ ಗಾಂಧಿ
ಸಾAಟಾಕ್ಲಾರಾ, ಮೇ ೩೧: ಪ್ರತಿಪಕ್ಷಗಳು ಸೂಕ್ತ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸೋಲಿಸಬಹುದು, ಕಾಂಗ್ರೆಸ್ ಪಕ್ಷವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ. ಸಾಂಟಾಕ್ರೂಜ್ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಿಲಿಕಾನ್ ವ್ಯಾಲಿ ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬಿಜೆಪಿಯಲ್ಲಿನ ದುರ್ಬಲತೆಗಳು ಸ್ಪಷ್ಟವಾಗುತ್ತಿವೆ. ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡಿದ್ದೇ ಆದರೆ, ಬಿಜೆಪಿಯನ್ನು ಸೋಲಿಸಬಹುದು ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಗಮನಿಸಿದರೆ, ಬಿಜೆಪಿ ವಿರುದ್ಧ ಹೋರಾಡಿ ಆ ಪಕ್ಷವನ್ನು ಸೋಲಿಸಬಹುದು ಎಂಬುದು ಅರಿವಿಗೆ ಬರುತ್ತಿದೆ. ಆದರೆ, ಈ ತಂತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಭಿನ್ನವಾದ ವಿಧಾನವನ್ನು ಬಳಸಿತ್ತು. ಭಾರತ್ ಜೋಡೋ ಯಾತ್ರೆ ಬಳಿಕ ಈ ಬದಲಾವಣೆಗಳು ಕಂಡು ಬಂದವು ಎಂದು ತಿಳಿಸಿದರು.
ಉದ್ಯಮಿ ಸಾವಿನ ರಹಸ್ಯ ಬಯಲು
ಬೆಂಗಳೂರು, ಮೇ ೩೧: ಬೆಂಗಳೂರಿನ ಜಿಪಿ ನಗರದಲ್ಲಿ ೬೭ ವರ್ಷದ ಉದ್ಯಮಿ ಬಾಲ ಸುಬ್ರಮಣಿಯನ್ ದೇಹವು ಪ್ಲಾಸ್ಟಿಕ್ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ, ಇದೀಗ ಈ ಪ್ರಕರಣ ತಿರುವು ಪಡೆದುಕೊಂಡಿದೆ. ನವೆಂಬರ್ ೧೭ ರಂದು ಬೆಂಗಳೂರಿನ ಜೆಪಿ ನಗರದ ೬ನೇ ಹಂತದ ರೋಸ್ ಗಾರ್ಡನ್ ಬಳಿ ಚೀಲ ಮತ್ತು ಬೆಡ್ಶೀಟ್ನಲ್ಲಿ ಸುತ್ತಿದ್ದ ರೀತಿಯಲ್ಲಿ ಸಂಶಯಾಸ್ಪದವಾಗಿ ಮೃತದೇಹವೊಂದು ಪತ್ತೆಯಾಗಿತ್ತು. ಮೃತದೇಹದ ಮೈಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ೬೭ ವರ್ಷದ ಉದ್ಯಮಿ ತನ್ನ ಮನೆ ಕೆಲಸದ ಮಹಿಳೆಯ ಜತೆಗೆ ಅಕ್ರಮ ಸಂಬAಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನು ನವೆಂಬರ್ ೧೬ ರಂದು ತನ್ನ ಮನೆ ಕೆಲಸದ ಮಹಿಳೆಯ ಮನೆಗೆ ಭೇಟಿ ನೀಡಿದ್ದ ಮತ್ತು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮಹಿಳೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಲವ್:ಹಣದ ಬೇಡಿಕೆ-ದೂರು ದಾಖಲು
ಬೆಂಗಳೂರು, ಮೇ ೩೧: ೨೩ ವರ್ಷದ ಯುವಕನೊಬ್ಬ ತನ್ನ ಬೆತ್ತಲೆ ಛಾಯಾಚಿತ್ರಗಳು ಮತ್ತು ವೀಡಿಯೋಗಳನ್ನು ಅಪರಿಚಿತ ಮಹಿಳೆಯೊಂದಿಗೆ ಫೇಸ್ಬುಕ್ನಲ್ಲಿ ಹಂಚಿಕೊAಡು ಇಕ್ಕಟ್ಟಿಗೆ ಸಿಲುಕಿದ್ದಾನೆ. ಸಂತ್ರಸ್ತ ವ್ಯಕ್ತಿ ಮಾಗಡಿ ನಿವಾಸಿ ಎನ್. ಪ್ರದೀಪ್ (ಹೆಸರು ಬದಲಾಯಿಸಲಾಗಿದೆ) ಎಂದು ಹೇಳಲಾಗಿದೆ. ತನ್ನನ್ನು ಎಸ್ ದೀಪಿಕಾ ಎಂದು ಪರಿಚಯಿಸಿಕೊಂಡ ಮಹಿಳೆಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾನೆ. ನಂತರ ಆಕೆ ರಾಮನಗರದವಳು ಎಂದು ಹೇಳಿಕೊಂಡಿದ್ದಾಳೆ. ಸ್ವಲ್ಪ ಸಮಯದ ನಂತರ ಇಬ್ಬರು ತಮ್ಮ ನಂಬರ್ಗಳನ್ನು ಬದಲಿಸಿಕೊಂಡಿದ್ದಾರೆ. ನಂತರ, ದೀಪಿಕಾ ಪ್ರದೀಪ್ ಅವರ ನಗ್ನ ವೀಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲು ಒತ್ತಾಯಿಸಿದ್ದಾಳೆ. ಪ್ರತಿಯಾಗಿ ಆಕೆಯು ತನ್ನದು ಎಂದು ಹೇಳಿಕೊಂಡ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾಳೆ. ಪ್ರದೀಪ್ ಫೋಟೋ ಮತ್ತು ವೀಡಿಯೋ ಕಳುಹಿಸಿದ ನಂತರ ಆಕೆ ಬ್ಲ್ಯಾಕ್ಮೇಲ್ ಆರಂಭಿಸಿದ್ದಾಳೆ. ತನ್ನ ಹಣದ ಬೇಡಿಕೆ ಈಡೇರಿಸದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರದೀಪ್ ಕಳುಹಿಸಿರುವ ಬೆತ್ತಲೆ ಫೋಟೋ ಮತ್ತು ವೀಡಿಯೋಗಳನ್ನು ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಕೆಲವು ದಿನಗಳ ನಂತರ ಪ್ರದೀಪ್ ಅವರ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆಗಳನ್ನು ರಚಿಸಲಾಗಿದೆ. ಆತನ ಫೋಟೋಗಳನ್ನು ಬಳಸಿಕೊಂಡ ಆರೋಪಿಗಳು ಅಶ್ಲೀಲ ವೀಡಿಯೋವನ್ನು ಸಹ ಹಂಚಿಕೊAಡಿದ್ದಾರೆ. ಈ ಸಂಬAಧ ಪ್ರದೀಪ್ ದೂರು ದಾಖಲಿಸಿದ್ದಾರೆ. ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸAಪುಟ ಸಭೆ ಜೂನ್ ೨ಕ್ಕೆ ಮುಂದೂಡಿಕೆ
ಬೆAಗಳೂರು, ಮೇ ೩೧: ಐದು ಗ್ಯಾರಂಟಿಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಜೂನ್ ೨ ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಐದು ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಸಭಾಂಗಣದಲ್ಲಿ ಎಲ್ಲಾ ಸಚಿವರುಗಳು ಮತ್ತು ಸಂಬAಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿಗಳು ಮಹತ್ವದ ಸಭೆಯನ್ನು ನಡೆಸಿದರು. ನಂತರ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಗೆ ಸಂಬAಧಿಸಿದAತೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮ ಸೇರಿದಂತೆ ವಿವರಗಳ ಪ್ರಾತ್ಯಕ್ಷಿಕೆಯನ್ನು ಸಲ್ಲಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣಕಾಸು ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಗುರುವಾರ ನಿಗದಿಪಡಿಸಲಾಗಿದ್ದ ಸಚಿವ ಸಂಪುಟ ಶುಕ್ರವಾರವಾರಕ್ಕೆ ಮುಂದೂಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಸಂಪುಟ ಸಭೆ ನಡೆಯಲಿದೆ.
ಶವಗಳ ಮೇಲೆ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ ೩೧: ಶವಗಳ ಮೇಲೆ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದಕ್ಕೆ ಐಪಿಸಿಯ ಸಂಬAಧಪಟ್ಟ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು ಅಥವಾ ಹೊಸ ಕಾನೂನನ್ನು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಶವದ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಶಿಕ್ಷೆ ನೀಡುವುದಕ್ಕೆ ಐಪಿಸಿ ಸೆಕ್ಷನ್ ೩೭೬ ರ ಅಡಿಯಲ್ಲಿ ಅವಕಾಶ ಇಲ್ಲದ ಕಾರಣ ಆರೋಪಿಯನ್ನು ಈ ಆರೋಪದಿಂದ ಬಿಡುಗಡೆ ಮಾಡಿರುವ ಹೈಕೋರ್ಟ್, ಕೇಂದ್ರಕ್ಕೆ ಈ ಸೂಚನೆ ನೀಡಿದೆ. ಆರೋಪಿ ಮಹಿಳೆಯನ್ನು ಕೊಲೆ ಮಾಡಿ ನಂತರ ಆಕೆಯ ಮೃತದೇಹದೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಐಪಿಸಿಯ ಸೆಕ್ಷನ್ ೩೦೨ (ಕೊಲೆ) ಅಡಿಯಲ್ಲಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ೫೦,೦೦೦ ರೂ.ಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ. ಆದರೆ ಆತ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಶಿಕ್ಷೆ ನೀಡಲು ಐಪಿಸಿ ಸೆಕ್ಷನ್ ಅಡಿಯಲ್ಲಿ ನಿರ್ದಿಷ್ಟ ನಿಬಂಧನೆಗಳಿಲ್ಲದ ಕಾರಣ ಈ ಅಪರಾಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೫ ರ ಅಡಿಯಲ್ಲಿ ಬರುತ್ತದೆಯೋ ಅಥವಾ ಸೆಕ್ಷನ್ ೩೭೭ ಅಡಿಯಲ್ಲಿ ಆತನನ್ನು ಶಿಕ್ಷಿಸಬೇಕೋ ಎಂಬ ಗೊಂದಲ ಉಂಟಾಗಿತ್ತು. ಸೆಕ್ಷನ್ ೩೭೫ ಹಾಗೂ ೩೭೭ ಅನ್ವಯವಾಗದ ಕಾರಣ ಇದರ ಅಡಿಯಲ್ಲಿ ಆತನನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾ. ಬಿ. ವೀರಪ್ಪ ಹಾಗೂ ವೆಂಕಟೇಶ್ ನಾಯ್ಕ್ ಟಿ. ಹೇಳಿದ್ದಾರೆ.