ಚೆಯ್ಯAಡಾಣೆ, ಮೇ ೩೧: ಜಿಲ್ಲೆಯ ಕುಂಜಿಲ ಕಕ್ಕಬ್ಬೆ ಸಮೀಪದ ವಯಕೋಲ್ ಗ್ರಾಮದಲ್ಲಿ (ಕೇರಳದ ಪುಳಿಂಜೊಲ್) ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಗಳ ಹೆಸರಿನಲ್ಲಿ) ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾಮೂಹಿಕ ಝಿಯಾರತ್, ಮೌಲಿದ್ ಪಾರಾಯಣ ಹಾಗೂ ಧಾರ್ಮಿಕ ಮತಪ್ರವಚನ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಸೌಹಾರ್ದ ಸಮಾವೇಶವು ಭಾನುವಾರ ಅಪರಾಹ್ನ ವಯಕೋಲ್ ಮಸ್ಜಿದುಲ್ ರಹ್ಮಾನ್ ಅಂಗಳದಲ್ಲಿ ನಡೆಯಿತು. ಜಾತಿ, ಮತ, ಭೇದವಿಲ್ಲದೆ ನಡೆದ ಸಾರ್ವಜನಿಕ ಸೌಹಾರ್ದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಬ್ಬಾರ್ ಸಖಾಫಿ ಉರೂಸ್ ಮತ ಸೌಹಾರ್ದತೆಗೆ ವೇದಿಕೆ ಕಲ್ಪಿಸಿದ್ದು ಶ್ಲಾಘನೀಯವಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷÀ ಶೌಕತ್ ಅಲಿ ವಹಿಸಿದ್ದರು.

ಈ ಸಂದರ್ಭ ಮುದರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ, ವಯಕೋಲ್ ಆಡಳಿತ ಮಂಡಳಿ ಅಧ್ಯಕ್ಷ ಹಂಸ, ಖತೀಬ್ ರಫೀಕ್ ಸಖಾಫಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಸಂತು ಸುಬ್ರಮಣಿ, ಹರೀಶ್ ಮೊಣ್ಣಪ್ಪ, ಅಬ್ದುಲ್ಲಾ ಸಹದಿ, ಕುಡಿಯರ ಮುತ್ತಪ್ಪ, ಪಕ್ರು ಮಾಸ್ಟರ್, ಖಲೀಲ್, ಅಬು, ನಿಸಾರ್, ವಯಕೋಲ್ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ನಂತರ ಮಸ್ಜಿದುಲ್ ರಹ್ಮಾನ್ ಅಂಗಳದಿAದ ಊರಿನ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಮತ್ತು ದಫ್ ರಾತೀಬ್ ಸಂಘದವರು ಮೆರವಣಿಗೆ ಮುಖಾಂತರ ಸಮೀಪದ ಪುಳಿಜೊಂಲ್ ಔಲಿಯಾ ವಿಶ್ರಾಂತಿ ಪಡೆದ ಸ್ಥಳಕ್ಕೆ ತೆರಳಿ ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂಜೆ ನೆರದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.