ಚೆಟ್ಟಳ್ಳಿ, ಮೇ ೩೦: ಕುಶಾಲನಗರ ತಾಲೂಕು ವಾಲ್ನೂರು- ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ಅಭ್ಯತ್‌ಮಂಗಲ ಗ್ರಾಮದ ಒಂಟಿಯAಗಡಿಯ ಮುಖ್ಯ ರಸ್ತೆಯಲ್ಲಿ ಶುಂಠಿ ವ್ಯಾಪಾರ ವಹಿವಾಟಿನ ವಿಷಯವಾಗಿ ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ರಾಶಿಕ್ ಎಂ.ಎ, ಅರಕಲಗೋಡು ಹಾಸನ ಮೂಲದ ವ್ಯಾಪಾರಿಗಳಾದ ರೇವಣ್ಣ ಎ.ಪಿ., ಮಧು ಬಿ.ಎಂ., ಜಗದೀಶ್ ಎನ್.ಕೆ. ಎಂಬ ಇವರುಗಳ ನಡುವೆ ಪರಸ್ಪರ ಕಲಹ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.