ಮಡಿಕೇರಿ, ಮೇ ೩೦: ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಕೇಂದ್ರಗಳಲ್ಲಿ ಕಚೇರಿ ಆರಂಭಿಸಿ ಜನರ ಅಹವಾಲು ಆಲಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಡಿಕೇರಿಯಲ್ಲಿ ಸುದ್ದಿಗಾg Àರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ೨ ಬಿಜೆಪಿ ಶಾಸಕರು ಕೇಂದ್ರದ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಇದೀಗ ತಾನೆ ಸ್ವತಃ ಜನರ ಕಷ್ಟ ಆಲಿಸುತ್ತೇನೆ. ಕಚೇರಿಯಲ್ಲಿ ಆಪ್ತಸಹಾಯಕನನ್ನು ನೇಮಿಸುತ್ತೇನೆ. ತಿಂಗಳಿಗೆ ೪-೫ ಬಾರಿ ಜಿಲ್ಲೆಯ ಜನರಿಗೆ ಸಿಗುತ್ತೇನೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತೇನೆ ಎಂದ ಅವರು, ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಮೋದಿ ಸರಕಾರ ಮತ್ತೊಮ್ಮೆ ಜಯಗಳಿಸುತ್ತದೆ. ತನ್ನ ವಿರುದ್ಧ ಯಾರೇ ಸ್ಪರ್ಧಿಸಿದರು ನನ್ನ ಸಾಧನೆ ಮುಂದಿಡುತ್ತೇನೆ. ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ತನಗಿದೆ. ಕೊಡಗು ಜಿಲ್ಲೆಯಲ್ಲಿ ಕಂಡ ಸೋಲು ಅನಿರೀಕ್ಷಿತ. ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರನ್ನು ಸೆಳೆದಿದ್ದಾರೆ. ಅದನ್ನು ಕಾರ್ಯಗತಗೊಳಿಸಲಿ. ಯಾವುದೇ ಷರತ್ತುಗಳನ್ನು ವಿಧಿಸದೆ ಅನುಷ್ಠಾನ ಮಾಡಲಿ ಎಂದರು.