ಮಡಿಕೇರಿ, ಮೇ ೨೯: ಜೂನ್ ೪ ರಂದು ಮಧ್ಯಾಹ್ನ ೩ರಿಂದ ಸಂಜೆ ೫ಗಂಟೆಯ ತನಕ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ಮಾಸಿಕ ತತ್ವ ಚಿಂತನಾ ಗೋಷ್ಠಿ ನಡೆಯಲಿದೆ.
ವಿಜ್ಞಾನ ವಿನೋದ ವಿಚಾರದಲ್ಲಿ ಡಾ. ಎಸ್. ನರಸಿಂAಹನ್ ಉಪನ್ಯಾಸ ನೀಡಲಿದ್ದು, ವ್ಯಾಲಿವ್ಯೂ ಶಾಲೆಯ ಪ್ರಬಂಧಕಿ ಸುಮಾ ಚಿತ್ರಭಾನು ಉದ್ಘಾಟಿಸಲಿದ್ದಾರೆ. ಮಠದ ಪೀಠಾಧಿಪತಿ ಶ್ರೀಶಾಂತ್ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.