ತಾ. ೨೮ ರಂದು ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ, ಬ್ರಿಟಿಷರು ತಮ್ಮ ಆಳ್ವಿಕೆಯ ಅಂತ್ಯದ ಬಳಿಕ ಅಧಿಕಾರ ಹಸ್ತಾಂತರದ ಸಂಕೇತವಾಗಿ ನೀಡಿದ ಸೆಂಗೂಲ್ (ರಾಜದಂಡ) ಸರ್ವರನ್ನು ಆಕರ್ಷಿಸುತ್ತಿದೆ. ರಾಜಧಾನಿಯಲ್ಲಿನ ೬೪,೫೦೦ ಚದರ ಮೀಟರ್ ವಿಶಾಲ ಪ್ರದೇಶದಲ್ಲಿ ರೂ.೮೬೨ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿರುವ ನೂತನ ಸಂಸತ್ ಭವನದಲ್ಲಿ ಉದ್ಘಾಟನೆ ವೇಳೆ ಈ ದಂಢವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸಭಾಪತಿ ಓಮ್ ಬಿರ್ಲಾ ಅವರು ಅಳವಡಿಸಿದರು.

ಬ್ರಿಟಿಷರಿಂದ ರಾಜದಂಡ ಪಡೆದ ನೆಹರೂ

ಬ್ರಿಟಿಷರು ಅಧಿಕಾರ ಹಸ್ತಾಂತರದ ಸಂಕೇತವಾಗಿ ನೀಡಿದ್ದ ಸೆಂಗೋಲ್‌ಅನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸ್ವೀಕರಿಸಿದ್ದರು. ಅವರು ಐತಿಹಾಸಿಕ ಭಾಷಣ ಮಾಡುವುದಕ್ಕೂ ೧೫ ನಿಮಿಷಗಳ ಮುನ್ನ ಇದನ್ನು ಸ್ವೀಕರಿಸಿದ್ದರು. ಆದರೆ ಅದು ಅಧಿಕೃತ ಕಾರ್ಯಕ್ರಮವಲ್ಲದಿದ್ದ ಕಾರಣ ಅಧಿಕೃತ ದಾಖಲೆಗಳಲ್ಲಿ ಇದು ಸೇರ್ಪಡೆಯಾಗಿರಲಿಲ್ಲ. ಇದನ್ನು ಅಲಹಾಬಾದ್‌ನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ಈ ರಾಜದಂಡಕ್ಕೆ ಅದರದ್ದೇ ಆದ ವಿಶೇಷ ಇತಿಹಾಸವಿದೆ. ಇದು ರಾಜರ ಆಡಳಿತವನ್ನು ನೆನಪಿಸುವ ಚಾರಿತ್ರ‍್ಯಿಕ ಮಹತ್ವ ಹೊಂದಿದೆ.

ಇಷ್ಟು ದಿನ ಇದು ಎಲ್ಲಿ ಇತ್ತು?

ಬ್ರಿಟಿಷ್ ಆಳ್ವಿಕೆ ಅಂತ್ಯದ ಬಳಿಕ ಅಧಿಕಾರ ಹಸ್ತಾಂತರದ ಸಂಕೇತವಾಗಿ ಏನನ್ನು ನೀಡಬಹುದು ಎಂಬ ಬಗ್ಗೆ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಜವಾಹರಲಾಲ್ ನೆಹರೂ ಅವರನ್ನು ಕೇಳಿದ್ದರು. ಆದರೆ ಅದರ ಬಗ್ಗೆ ತಕ್ಷಣಕ್ಕೆ ಉತ್ತರ ಇಲ್ಲದ ಕಾರಣ ನಂತರ ವಿವರ ಒದಗಿಸುವುದಾಗಿ ವೈಸ್ರಾಯ್ಗೆ ನೆಹರೂ ತಿಳಿಸಿದ್ದರು. ಕೂಡಲೇ ಆಗಿನ ಕೇಂದ್ರ ಗೃಹ ಮಂತ್ರಿ ಸಿ. ರಾಜಗೋಪಾಲಾಚಾರಿ ಅವರನ್ನು ನೆಹರೂ ಸಂಪರ್ಕಿಸಿದ್ದರು. ದಾಖಲೆಗಳನ್ನು ಹುಡುಕಾಡಿದ ರಾಜಗೋಪಾಲಾಚಾರಿ, ಇತರೆ ಇತಿಹಾಸ ತಜ್ಞರ ನೆರವು ಕೂಡ ಪಡೆದಿದ್ದರು. ಚೋಳರ ಅರಸ ಮನೆತನದಲ್ಲಿ ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರ ವರ್ಗಾವಣೆ ಮಾಡುವ, ರಾಜ ಪುರೋಹಿತರ ಆಶೀರ್ವಾದ ಹೊಂದಿರುವ ಅತ್ಯಂತ ಪವಿತ್ರ ರಾಜದಂಡದ ಬಗ್ಗೆ ಸಂಶೋಧನೆಯಿAದ ತಿಳಿದುಬಂದಿತ್ತು. ಬಳಿಕ ರಾಜಗೋಪಾಲಚಾರಿ ಅವರು ತಮಿಳುನಾಡಿನ ತಂಜಾವೂರು (ಆಗಿನ ತಂಜೋರೆ) ಜಿಲ್ಲೆಯ ಬ್ರಾಹ್ಮಣೇತರ ಸನ್ಯಾಸಿಗಳ ಪ್ರಮುಖ ಮಠ ತಿರುವಾವಡುದುರೈ ಅಧೀನಂ ಅನ್ನು ಸಂಪರ್ಕ ಮಾಡಿದ್ದರು. ಚೋಳರ ಕಾಲದ ರಾಜದಂಡವನ್ನು ಹೋಲುವ ಸೆಂಗೋಲ್‌ನ ಅಗತ್ಯವನ್ನು ವಿವರಿಸಿದ್ದರು. ಚೋಳರಂತಹ ತಮಿಳು ಸಾಮ್ರಾಟರು ಸಾಮಾನ್ಯವಾಗಿ ತಮ್ಮ ಕೈಯಲ್ಲಿ ರಾಜದಂಡ ಹಿಡಿದಿರುತ್ತಿ ದ್ದರು. ಹೊಸ ರಾಜನ ಕಿರೀಟಧಾರಣೆ ಬಳಿಕ ಅವರ ಪೂರ್ವಾಧಿಕಾರಿ ಅಥವಾ ರಾಜಗುರು ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜದಂಡವನ್ನು ಹಸ್ತಾಂತರ ಮಾಡುತ್ತಿದ್ದರು. ಸ್ವಾತಂತ್ರ‍್ಯದ ಸಂದರ್ಭದಲ್ಲಿ ರಾಜದಂಡವನ್ನು ಮಠವು ಹೊಸದಿಲ್ಲಿಗೆ ಕಳುಹಿಸಿದ್ದನ್ನು ೨೪ನೇ ಗುರುಮಹಾ ಸನ್ನಿಧಾನಂ ಅಂಬಾಲವನ ದೇಶಿಕಾ ಪರಮಾಚಾರ್ಯ ಸ್ವಾಮಿಗಳಾದ ಮೈಲಾದುದುರೈ ಧರ್ಮಾಪುರಂ ಅಧೀನಂ ವಿವರಿಸಿದ್ದಾರೆ.

"೨೦ನೇ ಮಠದ ಆಡಳಿತದ ಸಂದರ್ಭದಲ್ಲಿ ೧೯೪೭ರಲ್ಲಿ ಚಿನ್ನದ ರಾಜದಂಡವನ್ನು ದಿಲ್ಲಿಗೆ ಕಳುಹಿಸಲಾಗಿತ್ತು. ಆಡಳಿತದ ಅಧಿಕೃತ ಹಸ್ತಾಂತರದ ಸಂಕೇತವಾಗಿ ಅದನ್ನು ಜವಾಹರಲಾಲ್ ನೆಹರೂ ಅವರಿಗೆ ಮೌಂಟ್ ಬ್ಯಾಟನ್ ಅವರು ನೀಡಿದ್ದರು. ಅದೇ ರಾಜದಂಡವನ್ನು ಹೊಸದಾಗಿ ನಿರ್ಮಿಸಿರುವ ಸಂಸತ್ ಕಟ್ಟಡದ ಉದ್ಘಾಟನೆ ವೇಳೆ ಅಲ್ಲಿ ಅಳವಡಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

‘ಸೆಂಗೋಲ್’ - ತಮಿಳು ಮೂಲ

ಸೆಂಗೋಲ್ ಎಂದು ಕರೆಯಲಾಗುವ ರಾಜದಂಡವು ತಮಿಳಿನ 'ಸೆಮ್ಮಾಯಿ' ಎಂಬ ಪದದಿಂದ ಉದ್ಭವಿಸಿದೆ. ಇದರ ಅರ್ಥ 'ಸದಾಚಾರ' ಎಂದು. ಸೆಂಗೋಲ್‌ನ ತುದಿಯಲ್ಲಿ ನಂದಿಯ ರಚನೆಯಿದೆ. ಇದು ನ್ಯಾಯದ ಸಂಕೇತ. ಮಠದ ಸೂಚನೆಯಂತೆ ಐದು ಅಡಿ ಎತ್ತರದ ಚಿನ್ನದ ರಾಜದಂಡವನ್ನು ಚೆನ್ನೆöÊನಲ್ಲಿನ ವುಮ್ಮಿಡಿ ಬಂಗಾರು ಚೆಟ್ಟಿ ಜ್ಯುವೆಲರ್ಸ್ ತಕ್ಷಣವೇ ತಯಾರಿಸಿತ್ತು ಎಂದು ಕುಟುಂಬದ ಸದಸ್ಯರಾದ ವುಮ್ಮಿಡಿ ಎಥಿರಾಜುಲು (೯೬) ಹಾಗೂ ವುಮ್ಮಿಡಿ ಸುಧಾಕರ್ (೮೮) ನೆನಪಿಸಿಕೊಂಡರು.

ರಾಜದAಡ ಸಿದ್ಧವಾದ ಬಳಿಕ ಮಠದ ಮುಖ್ಯ ಅರ್ಚಕರು ತಮ್ಮ ಕೆಳಗಿನ ಅರ್ಚಕ ಹಾಗೂ ನಾದಸ್ವರ ವಾದಕ ಮತ್ತು ಗಾಯಕರೊಬ್ಬರನ್ನು ದಿಲ್ಲಿಗೆ ವಿಶೇಷ ವಿಮಾನದಲ್ಲಿ ಸೆಂಗೋಲ್ ಸಹಿತ ಕಳುಹಿಸಿದ್ದರು. ತಂಜಾವೂರಿನ ಮಠದ ಉಪ ಮುಖ್ಯ ಅರ್ಚಕ ಮೌಂಟ್ ಬ್ಯಾಟನ್ ಅವರನ್ನು ಮೊದಲು ಭೇಟಿಯಾಗಿ ಅವರ ಕೈಗೆ ಸೆಂಗೋಲ್ ಅನ್ನು ನೀಡಿ, ವಾಪಸ್ ಪಡೆದುಕೊಂಡು ಗಂಗಾಜಲದಿAದ ಶುದ್ಧೀಕರಿಸಿದ್ದರು. ನಂತರ ಅವರು ಅದನ್ನು ೧೯೪೭ರ ಆಗಸ್ಟ್ ೧೪ರಂದು ರಾತ್ರಿ ೧೧.೪೫ರ ಸುಮಾರಿಗೆ ನೆಹರೂ ಅವರ ತೀನ್ ಮೂರ್ತಿ ನಿವಾಸದ ಸ್ವಾಧೀನಕ್ಕೆ ಒಪ್ಪಿಸಲು ಸಾಗಿದ್ದರು. ಅಂದರೆ ಭಾರತಕ್ಕೆ ಅಧಿಕೃತವಾಗಿ ಸ್ವಾತಂತ್ರ‍್ಯ ದೊರಕುವುದಕ್ಕೂ ೧೫ ನಿಮಿಷಗಳ ಮುನ್ನ ನೆಹರೂ ಅವರಿಗೆ ಹಸ್ತಾಂತರಿಸ ಲಾಗಿತ್ತು. ಆಗ ವಿಶೇಷ ಹಾಡನ್ನು ಹಾಡಲಾಗಿತ್ತು. ಆದರೆ ಮಾಧ್ಯಮ ವರದಿಗಳ ಹೊರತಾಗಿ ಈ ಬಗ್ಗೆ ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಗ್ರಂಥಾಲಯ ದಲ್ಲಿ ಯಾವುದೇ ದಾಖಲೆಗಳಿಲ್ಲ.

(ಆಧಾರ)