ಗ್ಯಾರಂಟಿ ಯೋಜನೆ ಜಾರಿ ಖಚಿತ : ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ ೨೯: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ಚರ್ಚೆಯಾಗುತ್ತಿದ್ದು, ಈ ಸಂಬAಧ ಗಾಬರಿಯಾಗುವುದು ಬೇಡ. ಊಹಾಪೋಹಗಳಿಗೆ ಜನತೆ ಕಿವಿಗೊಡಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಯಾರು ಗಾಬರಿ ಆಗೋದು ಬೇಡ, ಊಹಾಪೋಹಗಳಿಗೆ ಕಿವಿಗೊಡೋದು ಬೇಡ. ನಾವು ಹೇಳಿದ್ದನ್ನೇ ಮಾಡುತ್ತೇವೆಂದು ಭರವಸೆ ನೀಡಿದರು. ಯಾರು ಬೇಕಾದರೂ ಚರ್ಚೆ ಮಾಡಲಿ. ಬೈಯೋರು ಬೈಯಲಿ. ಎಲ್ಲರಿಗೂ ಮಾತಾಡೋಕೆ ವಾಕ್ ಸ್ವಾತಂತ್ರ‍್ಯ ಇದೆ ಎಂದು ಹೇಳಿದರು.

ಉಪಗ್ರಹ ಉSಐಗಿ-ಈ೧೨ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ, ಮೇ ೨೯: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ ಉSಐಗಿ-ಈ೧೨ ಮತ್ತು ಓಗಿS-೦೧ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಜಿಎಸ್‌ಎಲ್‌ವಿಯ ಉಪಗ್ರಹ ಉಡಾವಣಾ ವಾಹನವು ತನ್ನ ೧೫ನೇ ಹಾರಾಟದಲ್ಲಿ ೨,೨೩೨ ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ ಓಗಿS-೦೧ನ್ನು ಇಂದು ಬೆಳಿಗ್ಗೆ ೧೦.೪೨ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆ ಮಾಡಲಾಗಿದೆ. ರಾಕೆಟ್ ಉಡಾವಣೆಯಾದ ೨೦ ನಿಮಿಷಗಳ ನಂತರ ಸುಮಾರು ೨೫೧ ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹವನ್ನು ಸೇರಿಸಿದೆ ಎಂದು ಇಸ್ರೋ ಹೇಳಿದೆ. ವೈಶಿಷ್ಟö್ಯಗಳೊಂದಿಗೆ ಇರುತ್ತದೆ. ಉಡಾವಣೆಯಾದ ೨೦ ನಿಮಿಷಗಳ ನಂತರ ಉಪಗ್ರಹವನ್ನು ಕಕ್ಷೆಯಲ್ಲಿ ಸೇರಿಸಲಾಯಿತು ಎಂದು ಇಸ್ರೋ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಓಗಿS-೦೧ ಓಚಿvIಅ ಸರಣಿಯಲ್ಲಿ ಎರಡನೇ ತಲೆಮಾರಿನ ಉಪಗ್ರಹಗಳ ಆರಂಭಕ್ಕೆ ಇದು ಸಾಕ್ಷಿಯಾಗಿದೆ. ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಪಗ್ರಹ ಉಡಾವಣೆ ಮಾಡಲಾಗಿದೆ. ಉಪಗ್ರಹ ಕಕ್ಷೆ ಸೇರುತ್ತಿದ್ದಂತೆ ವಿಜ್ಞಾನಿಗಳ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಪರಸ್ಪರ ಹಸ್ತಲಾಘವ ಮಾಡಿ ಶುಭ ಕೋರಿದರು. ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇಡೀ ತಂಡವನ್ನು ಅಭಿನಂದಿಸಿದ್ದಾರೆ.

೧೩ ವರ್ಷಗಳ ಬಳಿಕ ಕಾರವಾರದಿಂದ ಚೀನಾಗೆ ಕಬ್ಬಿಣದ ಅದಿರು ರಪ್ತು

ಕಾರವಾರ, ಮೇ ೨೯: ಕಾರವಾರ ಬಂದರಿನಿAದ ಸುಮಾರು ಹದಿಮೂರು ವರ್ಷಗಳ ನಂತರ ಕಬ್ಬಿಣದ ಅದಿರು ಈಗ ಚೀನಾದತ್ತ ಸಾಗುತ್ತಿದೆ. ಕಳೆದ ೧೩ ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು, ಆಗ ಸುಪ್ರೀಂಕೋರ್ಟ್ ಕರ್ನಾಟಕದ ಅದಿರನ್ನ ಎಲ್ಲಿಗೂ ರಫ್ತಾಗದಂತೆ ನಿಷೇಧಿಸಿ ಆದೇಶ ಮಾಡಿತ್ತು. ಅರಣ್ಯ ಇಲಾಖೆ ವಶಪಡಿಸಿಕೊಂಡ ಒಟ್ಟು ೧.೧೫ ಮೆಟ್ರಿಕ್ ಟನ್‌ಗಳಲ್ಲಿ ಸುಮಾರು ೩೭,೩೨೦ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಈಗ ಸ್ಥಳೀಯ ನ್ಯಾಯಾಲಯದ ಅನುಮತಿಯ ನಂತರ ವಸ್ತುಗಳನ್ನು ಹರಾಜು ಮಾಡಿದ ನಂತರ ಚೀನಾಕ್ಕೆ ರವಾನಿಸಲಾಗುತ್ತಿದೆ. ಕಬ್ಬಿಣದ ಅದಿರನ್ನು ೨೦೧೦ ರಲ್ಲಿ ವಶಪಡಿಸಿಕೊಳ್ಳಲಾಯಿತು ಮತ್ತು ಕಾರವಾರದಲ್ಲಿ ದಾಸ್ತಾನು ಮಾಡಲಾಗಿತ್ತು. ನಂತರದ ವರ್ಷ ಸುಮಾರು ೫೦,೦೦೦ ಮೆಟ್ರಿಕ್ ಟನ್ ಕಳ್ಳತನವಾಗಿದೆ ಎಂದು ವರದಿಯಾಗಿದೆ. ಈ ಸಂಬAಧ ಪ್ರಕರಣ ದಾಖಲಾಗಿದ್ದು, ಉಳಿದ ಅದಿರನ್ನು ವಿಲೇವಾರಿ ಮಾಡುವಂತೆ ಗಣಿಗಾರಿಕೆ ಸಂಸ್ಥೆಗಳು ಸ್ಥಳೀಯ ನ್ಯಾಯಾಲಯಗಳ ಮೊರೆ ಹೋಗಿದ್ದವು. ನ್ಯಾಯಾಲಯವು ಇತ್ತೀಚೆಗೆ ೩೨,೦೦೦ ಮೆಟ್ರಿಕ್ ಟನ್ ಅದಿರು ಹರಾಜಿಗೆ ಆದೇಶಿಸಿದೆ. ಆದರೆ, ಆದೇಶವಿದ್ದರೂ ಇಲ್ಲಿ ದಾಸ್ತಾನು ಮಾಡಿರುವ ಸಾಮಗ್ರಿ ಖರೀದಿಸಲು ಹೆಚ್ಚಿನವರು ಮುಂದೆ ಬರಲಿಲ್ಲ. ಇತ್ತೀಚೆಗೆ, ಮಹಾರಾಷ್ಟ್ರ ಮೂಲದ ಕಂಪನಿಯೊAದು ಆಸಕ್ತಿ ತೋರಿಸಿತು ಮತ್ತು ಕಬ್ಬಿಣದ ಅದಿರು ಸಂಗ್ರಹಿಸಲು ಟೆಂಡರ್ ನೀಡಲಾಯಿತು, ಅದು ೭,೦೦೦ ಮೆಟ್ರಿಕ್ ಟನ್‌ಗಳಿಗಿಂತ ಕಡಿಮೆಯಿತ್ತು. ಕಂಪನಿಯು ರಫ್ತು ಪರವಾನಗಿಯನ್ನು ಸಹ ಹೊಂದಿದ್ದು ಈಗಾಗಲೇ ಚೀನಾಕ್ಕೆ ರಫ್ತು ಮಾಡಲು ಪ್ರಾರಂಭಿಸಿದೆ.

ವAದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ

ನವದೆಹಲಿ, ಮೇ ೨೯: ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಸ್ಸಾಂನಲ್ಲಿ ಈಶಾನ್ಯ ಭಾರತದ ಮೊದಲ ‘ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿ'ಗೆ ವರ್ಚುಯಲ್ ಮೂಲಕ ಚಾಲನೆ ನೀಡಿದರು. ಈ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣ ಮತ್ತು ಅಸ್ಸಾಂನ ಗುವಾಹಟಿ ನಡುವೆ ಚಲಿಸುತ್ತದೆ. ನಂತರ ಮಾತನಾಡಿದ ಪ್ರಧಾನಿ, ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ಭಾರತದ ರೈಲ್ವೆ ಸಂಪರ್ಕತೆಗೆ ಇಂದು ಮಹತ್ವದ ದಿನವಾಗಿದೆ. ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜನರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ನೀಡುತ್ತದೆ ಎಂದರು.

‘ಗ್ಯಾರಂಟಿ’ ಎಲ್ಲರಿಗೂ ಅನ್ವಯವಾಗಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ, ಮೇ ೨೯: ಚುನಾವಣಾ ಸಮಯದಲ್ಲಿ ಹೇಗೆ ಖಾತರಿ ಕಾರ್ಡ್ಗಳನ್ನು ಮನೆ-ಮನೆಗೆ ವಿತರಿಸಲಾಗಿದೆಯೋ ಹಾಗೆಯೇ ಎಲ್ಲರಿಗೂ ಖಾತರಿ ಯೋಜನೆಗಳನ್ನು ನೀಡಲು ಸಾಧ್ಯವಿಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲಮಂಟಪ ಮಠದಲ್ಲಿ ಮಾತನಾಡಿದ ಅವರು, ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. ಆದರೆ ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತಾ. ೩೧ ರಿಂದ ಶೈಕ್ಷಣಿಕ ವರ್ಷ ಆರಂಭ

ಬೆAಗಳೂರು, ಮೇ ೨೯: ಬೇಸಿಗೆ ರಜೆ ಕಳೆದು ನೂತನ ಶೈಕ್ಷಣಿಕ ವರ್ಷ ತಾ. ೩೧ರಂದು ಬುಧವಾರ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಕಡ್ಡಾಯವಾಗಿ ಸಿಹಿ ಪದಾರ್ಥ ನೀಡುವಂತೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚನೆ ನೀಡಿದೆ. ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಒಟ್ಟು ೨೪೪ ದಿನ ಕಾರ್ಯನಿರ್ವಹಿಸಲಿವೆ. ಮೇ ೩೧ರಿಂದ ಶಾಲೆಗಳು ಅಕ್ಟೋಬರ್ ೭ ರವರೆಗೆ ಕಾರ್ಯನಿರ್ವಹಿಸುತ್ತವೆ. ಅಕ್ಟೋಬರ್ ೮ ರಿಂದ ಅಕ್ಟೋಬರ್ ೨೪ ರವರೆಗೆ ದಸರಾ ರಜೆಯಿರುತ್ತದೆ. ಎರಡನೇ ಅವಧಿಯು ಅಕ್ಟೋಬರ್ ೨೫ ರಂದು ಪ್ರಾರಂಭವಾಗಿ ಏಪ್ರಿಲ್ ೧೦, ೨೦೨೪ ರವರೆಗೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಅಪಘಾತದಲ್ಲಿ ೧೦ ಮಂದಿ ಸಾವು

ಮೈಸೂರು, ಮೇ ೨೯: ಮೈಸೂರು ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಸೋಮವಾರ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತದಲ್ಲಿ ೧೦ ಮಂದಿ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕೊಳ್ಳೇಗಾಲ - ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ೧೦ ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಇನ್ನೊವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.