ಗೋಣಿಕೊಪ್ಪ, ಮೇ ೨೯: ಕೊಡಗು ಆಯುರ್ವೇದ ಕೇರ್ ಹಾಗೂ ಸುಳ್ಯ ಸೌಭಾಗ್ಯ ಅಂಗವಿಕಲರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಜೂನ್ ೭ರಂದು ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗಾಗಿ ವೀರಾಜಪೇಟೆ ಪುರಭವನದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಶಿಬಿರ ನಡೆಯಲಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಶಿಬಿರ ನಡೆಯಲಿದ್ದು, ಕಾಲು ಇಲ್ಲದವರಿಗೆ ಉಚಿತವಾಗಿ ಕೃತಕ ಕಾಲು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.