ಚೆಯ್ಯಂಡಾಣೆ, ಮೇ ೨೯: ನಾಪೋಕ್ಲು ಸಮೀಪದ ಚೆರಿಯಪರಂಬು ಶಾದಿ ಮಹಲ್‌ನಲ್ಲಿ ಮಹರ್ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂದರ್ಭ ನಾಪೋಕ್ಲು ಜಮಾಅತ್ ವತಿಯಿಂದ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಮೌಲಾನ ಶಾಫಿ ಸಅದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹ್ಯಾರಿಸ್, ಕಾರ್ಯದರ್ಶಿ ಸಿ.ಹೆಚ್. ಅಹ್ಮದ್, ಉಪಾಧ್ಯಕ್ಷರಾದ ರಶೀದ್ ಪಿ.ಎಂ., ಅಬಿದ್ ಪಿ.ಎಸ್., ಅಬ್ದುಲ್ ರಹಮಾನ್, ಮನ್ಸೂರ್ ಅಲಿ, ಆಸ್ಕರ್, ಅಬ್ಬಾಸ್ ಮತ್ತಿತ್ತರರು ಇದ್ದರು.