ಮಡಿಕೇರಿ, ಮೇ ೨೯: ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಶಾಖೆ ವತಿಯಿಂದ ಮೊದಲನೆಯ ವರ್ಷದ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಕಾರ್ಯಕ್ರಮ ಜೂನ್ ೦೪ ಭಾನುವಾರ ಮಗ್ರಿಬ್ ನಮಾಜ್ ನಂತರ ಕಂಡಕರೆ ಮದರಸ ಮೈದಾನದಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಫ್ ಕಂಡಕರೆ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಜೆ ಏಳು ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಎಂ.ಎA ಅಬ್ದುಲ್ಲ ಫೈಝಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಶುಭನುಡಿಯನ್ನು ಕಂಡಕರೆ ಮಸ್ಜಿದ್ ತಖ್ವಾ ಖತೀಬರಾದ ಮುಸ್ತಫಾ ಸಖಾಫಿ ನೆರವೇರಿಸಲಿದ್ದಾರೆ. ಮಜ್ಲಿಸುನ್ನೂರ್ ನೇತೃತ್ವವನ್ನು ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರಿ ಪಟ್ಡಾಂಬಿ ನೆರವೇರಿಸಲಿದ್ದಾರೆ.