ಮಡಿಕೇರಿ, ಮೇ ೨೪: ಭಾರತದ ಧೀಮಂತ ಸೇನಾಧಿಕಾರಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಸೇನಾಜೀವನ ಪ್ರತಿಯೋರ್ವ ಯುವಕ, ಯುವತಿಯರಿಗೂ ಆದರ್ಶಪ್ರಾಯ. ನಮಗೆ ಎಲ್ಲವನ್ನೂ ನೀಡಿದ ಭಾರತಕ್ಕೆ ನಾವು ಮಹತ್ವದ್ದೇನನ್ನಾದರೂ ನೀಡಬೇಕೆಂಬ ನಿಲುವನ್ನು ತಿಮ್ಮಯ್ಯ ಅವರ ಜೀವನದ ಮಾಹಿತಿ ಪಡೆದ ಎಲ್ಲರೂ ಹೊಂದಬೇಕೆAದು ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.
ಪತ್ನಿ ಅಖಿಲಾ ಸ್ವಾಮಿನಾಥನ್, ಪುತ್ರ ಅರ್ಜುನ್, ಪುತ್ರಿ ಆರಾಧನ ಅವರೊಂದಿಗೆ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಣ್ಣಾಮಲೈ, ತಿಮ್ಮಯ್ಯ ಅವರ ಜೀವನದ ಬಗ್ಗೆ ಮಾಹಿತಿಯನ್ನು ಫೀಲ್ಡ್ ಮಾರ್ಷಲ್ ಕೆಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂದ ಅವರಿಂದ ಪಡೆದುಕೊಂಡರು.
ಈ ಸಂದರ್ಭ ಪ್ರತಿಕ್ರಿಯಿಸಿದ ಅಣ್ಣಾಮಲೈ, ಭಾರತದ ಅಪ್ರತಿಮ ಸೇನಾನಿ ಜನರಲ್ ತಿಮ್ಮಯ್ಯ ಕೊಡಗಿನವರು ಎಂಬುದೇ ಕೊಡಗಿಗೆ ಪ್ರತಿಷ್ಟೆಯ ವಿಚಾರವಾಗಿದೆ. ಇಂಥ ಧೀರಸೇನಾನಿಯನ್ನು ಹೊಂದಿದ್ದ ಕೊಡಗಿನ ಪವಿತ್ರ ಭೂಮಿ ಧನ್ಯವಾಗಿದೆ. ತಿಮ್ಮಯ್ಯ ಸ್ಮರಣಾರ್ಥ ಸ್ಮಾರಕ ಭವನ ಹೊಂದುವ ಮೂಲಕ ಅವರ ಜೀವನ ಮತ್ತು ಸೇನಾ ಸಾಧನೆಯನ್ನು ವಿಶ್ವಕ್ಕೆ ತಿಳಿಸುವ ಕೆಲಸವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇಂಥ ವೀರನ ಸ್ಮಾರಕ ಭವನಕ್ಕೆ ಭೇಟಿ ನೀಡಿರುವುದು ತನ್ನಲ್ಲಿ ಧನ್ಯತೆ ಮೂಡಿಸಿದೆ ಎಂದು ಹೇಳಿದರು.
ಈ ಸಂದರ್ಭ ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಹಾಜರಿದ್ದರು. ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಣ್ಣಾಮಲೈ ಇದು ರಾಜಕೀಯ ಮಾತಿಗೆ ಸಮಯ ಸಂದರ್ಭವಲ್ಲ. ತಾನು ಎರಡು ದಿನಗಳ ಕಾಲ ಕುಟುಂಬದೊAದಿಗೆ ಕೊಡಗಿನಲ್ಲಿ ಪ್ರವಾಸ ಮಾಡುತ್ತಿರುವುದಾಗಿ ತಿಳಿಸಿದರು.