ಮಡಿಕೇರಿ, ಮೇ ೨೪: ಭವಿಷ್ಯ ನಿಧಿ ನಿಮ್ಮ ಹತ್ತಿರ ೨.೦ ಅಡಿಯಲ್ಲಿ ತಾ. ೨೯ರಂದು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಪಿ.ಎಫ್. ಸದಸ್ಯರು, ಪಿಂಚಣಿದಾರರು, ಉದ್ಯೋಗದಾತರು ಇಲ್ಲಿ ಭವಿಷ್ಯ ನಿಧಿಯ ಕುರಿತು ಮಾಹಿತಿ ಪಡೆಯಬಹುದು.
ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಚೇರಿ ಸಂಖ್ಯೆ : ೦೮೨೧-೨೫೯೯೨೦೦/೨೨೨ ಅನ್ನು ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದು ಎಂದು ಮೈಸೂರು ಕ್ಷೇತ್ರೀಯ ಕಚೇರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.