ವೀರಾಜಪೇಟೆ, ಮೇ ೨೪: ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗ್ಗುಲ ಗ್ರಾಮದಲ್ಲಿ ನೆಲೆ ಕಂಡಿರುವ ಸುಮಾರು ೩೬೫ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಪಾಲ್ ತಿರಿಕೆ ಅಯ್ಯಪ್ಪ ದೇಗುಲದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಗಳು ತಾ. ೨೫ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ವೇದಮೂರ್ತಿ ಶ್ರೀ ಗಿರೀಶ್ ತಂತ್ರಿಗಳ ಸಾನಿಧÀ್ಯದಲ್ಲಿ ತಾ.೨೫ರಿಂದ ತಾ.೨೭ರ ತನಕ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ತಾ.೨೫ರಂದು ಸಂಜೆ ದೇವತಕ್ಕರ ಮನೆಯಿಂದ ಭಂಡಾರ ತರುವುದು, ಪಂಚಗವ್ಯ ಪುಣ್ಯಾಹ, ಸ್ಥಳಶುದ್ಧಿ, ಆಚಾರ್ಯ ವರ್ಣ, ಪ್ರಾಶಾ ಶುದ್ಧಿ, ಅಂಕುರ ಪೂಜೆ, ವಾಸ್ತು ಹೋಮ, ಸುದರ್ಶನ ಹೋಮ, ವಾಸ್ತು ಬಲಿ, ದಿಕ್ಪಾಲಕ ಬಲಿ ನಡೆಯಲಿದೆ. ತಾ.೨೬ರಂದು ಬೆಳಿಗ್ಗೆ ಅಂಕುರ ಪೂಜೆ, ಗಣ ಹೋಮ, ದುರ್ಗಾ ಹೋಮ, ಆಶ್ಲೇಷ ಬಲಿ. ಪ್ರಧಾನ ಹೋಮ, ಅಪರಾಹ್ನ ೪ ಗಂಟೆಗೆ ಅಂಕುರ ಪೂಜೆ, ದುರ್ಗಾ ಹೋಮ, ಪ್ರಾಯಶ್ಚಿತ್ತ ಹೋಮ, ಐಕ್ಯಮತ ಹೋಮ ಬ್ರಹ್ಮಕಲಶ ಪ್ರತಿಷ್ಟೆ, ಮಹಾಪೂಜೆ ಆದಿವಾಸ ಪೂಜೆ ಮತ್ತು ಶಯನಾದಿವಾಸ ಪೂಜೆ ನಡೆಯಲಿದೆ. ತಾ.೨೭ರಂದು ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪ್ರತಿಷ್ಠಾ ಹೋಮ, ತತ್ವ ಹೋಮ, ಗಣಪತಿ ಪತ್ರಿಷ್ಟೆ, ಕಲಶಾಭಿಷೇಕ ಪೂಜೆಗಳು, ೧೧.೪೫ ಗಂಟೆಗೆ ಸಿಂಹ ಲಗ್ನದಲ್ಲಿ ಶ್ರೀ ಪಾಲ್‌ತಿರಿಕೆ ಅಯ್ಯಪ್ಪ ದೇವರ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಕುಂಭ ಪ್ರತಿಷ್ಟೆ, ಮಾಹಾಪೂಜೆ, ನುಡಿಕಟ್ಟು ಪ್ರಾರ್ಥನೆ, ಉತ್ಸವ ಬಲಿ, ಮಹಾ ಮಂತ್ರಾಕ್ಷತೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿಯ ಅಧÀ್ಯಕ್ಷ ಚೋಕಂಡ ರಮೇಶ್ ಮಾಹಿತಿ ನೀಡಿದರು.