ಮಡಿಕೇರಿ,ಮೇ ೨೩ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಆರೋಗ್ಯ ಸಮಿತಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಹೀಯರಿಂಗ್ ಸ್ಪೀಚ್ ಇಂಪ್ಲಾAಟ್ ಕ್ಲಿನಿಕ್ ಹಾಗೂ ಮೂರ್ನಾಡುವಿನ ಶ್ರೀದೇವಿ ಮೆಡಿಕಲ್ ಸೆಂಟರ್ ಹಾಗೂ ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ; ಇದು ಮೂರನೇ ಆರೋಗ್ಯ ತಪಾಸಣಾ ಶಿಬಿರವಾಗಿದ್ದು, ತಾ. ೨೭ರಂದು ಬೆಳಿಗ್ಗೆ ೧೦ರಿಂದ ಸಂಜೆ ೪ಗಂಟೆವರೆಗೆ ಮೂರ್ನಾಡು ಶ್ರೀದೇವಿ ಮೆಡಿಕಲ್ ಸೆಂಟರ್‌ನಲ್ಲಿ ನಡೆಯಲಿದೆ. ಶೀತ, ಕೆಮ್ಮು, ನೆಗಡಿ, ಜ್ವರ, ಹೊಟ್ಟೆಗೆ ಸಂಬAಧಿಸಿದ ಕಾಯಿಲೆ, ಹೃದಯ ಸಂಬAಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಮೂಳೆಗೆ ಸಂಬAಧಿಸಿದ ಎಲ್ಲ ತರಹದ ಚಿಕಿತ್ಸೆ, ಕಿವಿ, ಮೂಗು, ಗಂಟಲು ಹಾಗೂ ಚರ್ಮರೋಗಗಳಿಗೆ ಸಂಬAಧಿಸಿದ ಕಾಯಿಲೆಗಳಿಗೆ ಆರ್ಯುವೇದ ಹಾಗೂ ಆಲೋಪತಿ ವಿಧಾನಗಳ ಮೂಲಕ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಮುಂದಿನ ದಿನಗಳಲ್ಲಿ ಹಾಡಿಗಳಲ್ಲಿ ಶಿಬಿರ ಆಯೋಜನೆ ಮಾಡುವ ಚಿಂತನೆ ಹೊಂದಿರುವದಾಗಿ ಹೇಳಿದರು.

ಡಾ. ಅನುಷಾ ಮಾತನಾಡಿ; ಆಯುರ್ವೇದದಿಂದ ಚಿಕಿತ್ಸೆ ನಿಧಾನವಾಗಲಿದೆ ಎಂಬ ಭಾವನೆ ಜನರಲ್ಲಿದೆ. ಆದರೆ, ಇದರಿಂದ ಉಪಯುಕ್ತವಾಗಲಿದೆ. ಪಂಚಕರ್ಮ ಹಾಗೂ ಶಮನ ಎಂಬ ಎರಡು ವಿಧಾನಗಳಿದ್ದು, ಪಂಚಕರ್ಮದಲ್ಲಿ ಔಷಧಿಯಿಂದ ಗುಣಪಡಿಸಬಹು ದಾದರೆ, ಶಮನದ ಮೂಲಕ ಔಷಧಿಯಿಲ್ಲದೆ ಗುಣಪಡಿಸಬಹುದು. ಎಲ್ಲದಕ್ಕೂ ಔಷಧ ಬೇಕೆಂದಿಲ್ಲ, ಶಮನದಿಂದ ಗುಣಪಡಿಸಬಹುದಾಗಿದೆ. ಶಿಬಿರದ ಪ್ರಯೋಜನ ಪಡೆದು ಕೊಳ್ಳುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಆರೋಗ್ಯ ಸಮಿತಿ ಸಂಚಾಲಕ ಅಬ್ದುಲ್ಲ, ಥೋಮಸ್ ಅಲೆಗ್ಸಾಂಡರ್, ಶ್ರೀ ದೇವಿ ಮೆಡಿಕಲ್ ಸೆಂಟರ್‌ನ ಸಂಧ್ಯಾ ಹಾಗೂ ಬೋಪಣ್ಣ ಇದ್ದರು.