ಮಡಿಕೇರಿ, ಮೇ ೨೨: ಡಿಜಿಟಲ್ ಯುಗದಲ್ಲಿ ಎಲ್ಲ ವ್ಯವಹಾರಗಳು ಆನ್ ಲೈನ್ ಮುಖೇನ ನಡೆಯುತ್ತಿದ್ದು, ಹಣ ಪಾವತಿಗಂತು ಸಣ್ಣ ಪುಟ್ಟ ದಿನಸಿ ಪದಾರ್ಥಗಳಿಗೂ ನಗದು ವ್ಯವಹಾರದ ಬದಲು ಗೂಗಲ್ ಪೆ, ಫೋನ್ ಪೇ ಇತ್ಯಾದಿ ಡಿಜಿಟಲ್ ಬ್ಯಾಂಕಿAಗ್ ಸೌಲಭ್ಯಗಳನ್ನೇ ಬಹುತೇಕ ವ್ಯಾಪಾರಿಗಳು ಹಾಗೂ ಗ್ರಾಹಕರು ಅವಲಂಬಿಸಿದ್ದಾರೆ. ಆದರೆ ಇಲ್ಲಿ ಡಿಜಿಟಲ್ ವ್ಯವಸ್ಥೆ ಬಗ್ಗೆ ವ್ಯಾಪಾರಿಗಳಿಗೆ ಅರಿವಿರಬೇಕಾಗಿದೆ. ಇಲ್ಲದಿದ್ದಲ್ಲಿ ಸುಲಭವಾಗಿ ಮೋಸ ಹೋಗಲಿದ್ದಾರೆ.

ಇದಕ್ಕೆ ೨ ದಿನಗಳ ಹಿಂದೆ ಕುಶಾಲನಗರದಲ್ಲಿ ನಡೆದ ಘಟನೆಯೇ ಸಾಕ್ಷಿ. ಇಲ್ಲಿನ ಸಾಯಿ ರಾಮ್ ಹಾಟ್ ಚಿಪ್ಸ್ ಅಂಗಡಿಗೆ ಆಗಮಿಸಿದ ಗ್ರಾಹಕನೋರ್ವ ರೂ.೭೦೦ ಹಾಗೂ ಮುಂದಿನ ದಿನ ರೂ.೪೦೦ ರಷ್ಟು ಸಾಮಗ್ರಿಗಳನ್ನು ಖರೀದಿಸಿ ಗೂಗಲ್ ಪೇ ಮೂಲಕ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾನೆ. ಬಳಿಕ ಹಣ ಜಮಾ ಆಗಿರುವುದಾಗಿ ಫೋನ್ ತೋರಿಸಿದ್ದಾನೆ. ಫೋನ್‌ನಲ್ಲಿ ‘ರೂ.೭೦೦ ಪೇಡ್’ ಎಂದು ಬಂದ ಸಂದೇಶವನ್ನು ಮಾಲೀಕನಿಗೆ ತೋರಿಸಿದ್ದಾನೆ. ಮುಂದಿನ ದಿನವೂ ಇದೇ ರೀತಿ ಮಾಡಿದ್ದಾನೆ. ಆದರೆ ಈ ಸಂದೇಶಗಳು ಕೇವಲ `ಗ್ರಾಫಿಕ್ ಡಿಸೈನ್' ಅಷ್ಟೇ ಹೊರತು ಅಸಲು ಸಂದೇಶವಲ್ಲ ಎಂಬುದು ಮಾಲೀಕನಿಗೆ ಅರಿವಾಗಲಿಲ್ಲ. ಗ್ರಾಹಕನು ತೆರಳಿದ ಬಳಿಕ ತಮ್ಮ ಗೂಗಲ್ ಪೇ ನಲ್ಲಿ ಯಾವುದೇ ಹಣ ಬಂದಿರುವ ಸಂದೇಶ ಬಾರದ ಕಾರಣ ಮಾಲೀಕನು ಸಂಶಯಗೊAಡು ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಿದ್ದು, ಬ್ಯಾಂಕ್‌ನಲ್ಲಿ ಕೂಡ ಯಾವುದೇ ಹಣ ಬಂದಿಲ್ಲ ಎಂಬುದು ತಿಳಿದಿದ್ದು ಮೋಸ ಹೋಗಿದ್ದಾರೆ.

(ಮೊದಲ ಪುಟದಿಂದ) ಎಚ್ಚರ ಅಗತ್ಯ ಗೂಗಲ್ ಪೇ ಇತ್ಯಾದಿ ಡಿಜಿಟಲ್ ಮಾಧ್ಯಮಗಳ ಮೂಲಕ ಹಣ ಪಡೆಯುವಾಗ ನೀವು ವ್ಯಾಪಾರಿಗಳಾಗಿದ್ದಲ್ಲಿ, ಗೂಗಲ್ ಪೇ ಬ್ಯುಸಿನೆಸ್ ಆ್ಯಪ್ ಡೌನ್ಲೋಡ್ ಮಾಡುವ ಅವಶ್ಯಕತೆ ಇದೆ. ಈ ಆ್ಯಪ್‌ನಲ್ಲಿ, ಗ್ರಾಹಕರು ಹಣ ಸಂದಾಯ ಮಾಡಿದಾಕ್ಷಣ ವಾಯ್ಸ್ ಸಂದೇಶವೊAದು ಬರಲಿದೆ. ಆ ಮೂಲಕ ಮೋಸ ಹೋಗುವುದನ್ನು ತಪ್ಪಿಸಬಹುದಾಗಿದೆ. ಇಲ್ಲದಿದ್ದಲಿ ಗ್ರಾಹಕಾರ ‘ಟ್ರಾನ್ಸಾಕ್ಷನ್ ಐ.ಡಿ’ ಕೂಡ ಪರಿಶೀಲಿಸಬಹುದಾಗಿದೆ.

ಕೆಲ ಮೋಸಗಾರರು ‘ಪೇಡ್’ ಅಂತ ಗೂಗಲ್ ಪೇ, ಇತ್ಯಾದಿಗಳನ್ನು ಹೋಲುವ ಡಿಸೈನ್ ರೂಪಿಸಿ ಈ ರೀತಿ ಮೋಸ ಮಾಡುವುದನ್ನು ಈ ಮೂಲಕ ತಪ್ಪಿಸಬಹುದಾಗಿದೆ.

-ಟಿ.ಜಿ ಸತೀಶ್