ಕೊಡ್ಲಿಪೇಟೆ, ಮೇ ೨೩: ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಹಾಗೂ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಜಮಾಅತ್ ವ್ಯಾಪ್ತಿಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್.ಕೆ.ಎಸ್.ಎಸ್.ಎಫ್. ಹಾಗೂ ಎಸ್.ವೈ.ಎಸ್. ಕೊಡ್ಲಿಪೇಟೆ ಶಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನೂರ್ ಮಹಲ್‌ನಲ್ಲಿ ಆಯೋಜಿಸಿದ್ದ ಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಫಾತಿಮತ್ ಸಫ್ನಾ ಪ್ರಥಮ ಹಾಗೂ ಸನಾ ದ್ವೀತಿಯ, ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಫಾ ಹಾಗೂ ಕಲಾ ವಿಭಾಗದಲ್ಲಿ ನಫೀಸತ್ ನಾಫಿಯಾ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ತಜಲ್ಲಿಯಾತ್ ಮದರಸ ಮುಖ್ಯೋಪಾಧ್ಯಾಯರಾದ ರಝಾಕ್ ಫೈಝಿ, ಸಮದ್ ಫೈಝಿ, ಮಸ್ಜಿದುನ್ನೂರ್ ಅಧ್ಯಕ್ಷರಾದ ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಹಾಜಿ, ಎಸ್.ವೈ.ಎಸ್. ಕೊಡ್ಲಿಪೇಟೆ ಶಾಖಾಧ್ಯಕ್ಷರಾದ ಇಬ್ರಾಹಿಂ, ಅಧ್ಯಕ್ಷರಾದ ಬಾಸಿತ್ ಹಾಜಿ ಭಾಗವಹಿಸಿದ್ದರು. ಝಹೀರ್ ನಿಝಾಮಿ ಕಾರ್ಯಕ್ರಮ ನಿರೂಪಿಸಿದರು.