ಚೆಟ್ಟಳ್ಳಿ, ಮೇ ೨೩: ತಾ.೨೪ ಮತ್ತು ೨೫ರಂದು ನಡೆಯುವ ದೇವರಪುರ ಬೋಡ್ ನಮ್ಮೆಗೆ ಸಿದ್ಧತೆ ನಡೆಯುತ್ತಿದೆ.

ತಾ.೨೪ರಂದು ಪಟ್ಟಣಿಯಂದು ಊರಿನವರು ದೇವಾಲಯದಲ್ಲಿ ಸೇರಿ ಅಂಬಲಕ್ಕೆ ತೆÀರಳಿ ದೇವರ ಬಟ್ಟೆಬರೆ ಕಡತಲೆಗಳನ್ನೆಲ್ಲ ತಂದು ಶುದ್ದಗೊಳಿಸಿ ವಿವಿಧಪೂಜಾ ಕೈಂಕರ್ಯ ನಡೆಸುವರು.

ತಾ.೨೫ರಂದು ದೊಡ್ಡಹಬ್ಬವಾಗಿದ್ದು, ಮಧ್ಯಾಹ್ನ ನಡೆಯುವ ಹಬ್ಬದ ಆಚರಣೆಯಂದು ತಕ್ಕಮುಖ್ಯಸ್ಥರು ಊರಿನವರ ಸಮ್ಮುಖದಲ್ಲಿ ದೇವರ ಮೊಗ ತಂದು ಶುದ್ದಗೊಳಿಸಿ ಅಲಂಕರಿಸಿ ಪೂಜೆ ಸಲ್ಲಿಸಿ ಪಣಿಕನಿಗೆ ಕಟ್ಟುವ ಮೂಲಕ ಅಯ್ಯಪ್ಪ ಹಾಗೂ ಭದ್ರಕಾಳಿಗೆ ವಿಶೇಷಪೂಜಾ ಕೈಂಕರ್ಯ ನೆರವೇರುವುದು

ಮದ್ಯ ಮಾರಾಟ ನಿಷೇಧ

ದೇವರಪುರ ಗ್ರಾಮ ಪಂಚಾಯಿತಿಗೆ ಸೇರುವ ದೇವರಪುರ ಗ್ರಾಮದಲ್ಲಿ ಶ್ರಿ ಅಯ್ಯಪ್ಪ ಮತ್ತು ಭದ್ರಕಾಳಿ ದೇವರ ಬೇಡುಹಬ್ಬವು ತಾ.೨೪ ಮತ್ತು ೨೫ ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅಪಘಾತ, ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದAತೆ ನೋಡಿಕೊಳ್ಳುವ ಸಲುವಾಗಿ ತಾ. ೨೪ರ ಮಧ್ಯರಾತ್ರಿ ೧೨ ಗಂಟೆಯಿAದ ತಾ.೨೫ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಗೋಣಿಕೊಪ್ಪ ಮತ್ತು ಸುತ್ತಮುತ್ತಲಿನ ೧೦ ಕಿ. ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್‌ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಆದೇಶ ಹೊರಡಿಸಿದ್ದಾರೆ.