ಸುಂಟಿಕೊಪ್ಪ, ಮೇ ೨೩: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಮಂಗಳವಾರ ನಡೆದ ಪಂದ್ಯದಲ್ಲಿ ವಿಜಯ ನಗರ ಎಫ್.ಸಿ. ಮೈಸೂರು. ಮತ್ತು ಫೈಟರ್ ಎಫ್.ಸಿ. ಕೂತುಪರಂಬು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಸಿದವು.

ಎಸ್.ಯು. ಎಫ್.ಸಿ. ನಂಜನ ಗೂಡು ಯಾಮಿಟಿ ಎಫ್.ಸಿ. ಗದ್ದೆ ಹಳ್ಳ ತಂಡಗಳ ನಡುವೆ ನಡೆದ ಪಂದ್ಯದ ಮೊದಲಾರ್ಧದಲ್ಲಿ ವಿಜಯನಗರ ತಂಡದ ಮುನ್ನಡೆ ಆಟಗಾರ ಪ್ರೀತಮ್ ೨೯ನೇ ನಿಮಿಷದಲ್ಲಿ ಗೋಲು ಹೊಡೆದರು. ೧-೦ ಗೋಲುಗಳಿಂದ ವಿಜಯ ನಗರ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸಿತು.

ಎರಡನೇ ಪಂದ್ಯವು ಫೈರ‍್ಸ್ ಎಫ್.ಸಿ. ಕೂತುಪರಂಬು ಹಾಗೂ ಎಸ್.ಯು. ಎಫ್.ಸಿ. ನಂಜನಗೂಡು ನಡೆದು ೨೮ನೇ ನಿಮಿಷದಲ್ಲಿ ನಂಜನ ಗೂಡು ತಂಡದ ಆಟಗಾರನ ಕಣ್ತಪ್ಪಿನಿಂದ ಕೂತುಪರಂಬು ತಂಡಕ್ಕೆ ಟ್ರೆöÊ ಬ್ರೇಕರ್ ಅವಕಾಶ ಲಭಿಸಿತು. ಇದನ್ನು ಬಳಸಿಕೊಂಡ ತಂಡದ ಆಟಗಾರ ಅಸ್ಕರ್ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ದ್ವಿತೀಯಾರ್ಧದಲ್ಲಿ ೧೯ನೇ ನಿಮಿಷದಲ್ಲಿ ರಾಪೀಲ್ ಗೊಲು ಹೊಡೆದರು. ಮತ್ತೊಬ್ಬ ಆಟಗಾರ ರಾಸೀದ್ ಕೊನೇ ಗಳಿಗೆಯಲ್ಲಿ ಗೋಲು ಬಾರಿಸಿದ ಪರಿಣಾಮ ೩-೦ ಗೋಲುಗಳಿಂದ ಫೈರ‍್ಸ್ ಎಫ್.ಸಿ ಕೂತುಪರಂಬು ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಇಂದಿನ ಪಂದ್ಯ

ಹೋರಿಜಾನ್ ಎಫ್.ಸಿ ಬೆಂಗಳೂರು ಮತ್ತು ಪೈರ‍್ಸ್ ಎಫ್.ಸಿ. ಕೂತುಪರಂಬು, ಮೊಗ್ರಾಲ್ ಎಫ್.ಸಿ ಕುಂಬ್ಲೆ ಹಾಗೂ ವಿಜಯ ನಗರ ಎಫ್.ಸಿ. ಮೈಸೂರು.