ಸಿದ್ದಾಪುರ, ಮೇ ೨೩: ವರ್ಕಲ ಮುಲ್ಲಕೋಯ ತಙಳ್ ಸಮತಾ ಭವನ ಹಾಗೂ ಖಾಝಿ ಭವನ ಉದ್ಘಾಟನೆ ಸಮಾರಂಭವು ಸಿದ್ದಾಪುರ ದಲ್ಲಿ ನಡೆಯಿತು.

ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಿರ್ಮಾಣಗೊಂಡ ಈ ಭವ್ಯ ಭವನದ ಉದ್ಘಾಟನೆಯನ್ನು ಸೈಯದ್ ಉಲಾಮ ಮೊಹಮ್ಮದ್ ಜಫ್ರೀ ನೆರವೇರಿಸಿದರು.

ಎಸ್.ವೈ.ಎಸ್. ಸಂಘಟನೆಯು ದಾನಿಗಳ ಸಹಾಯದಿಂದ ಈ ಒಂದು ಭವ್ಯ ಭವನವನ್ನು ನಿರ್ಮಾಣ ಮಾಡಿದ್ದು ಸಂಘಟನೆಯ ಕಾರ್ಯಕ್ಕೆ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಜಾತ್ಯತೀತ, ಸೌಹಾರ್ದ ಸಮಾಜ ನಿರ್ಮಾಣದ ಸಂದೇಶವನ್ನು ಹೊತ್ತು ಜಾಗೃತಿ ಜಾಥಾಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗಿದ್ದು ಈ ಜಾಥಾವು ಕೊಡಗು ಜಿಲ್ಲೆಯಿಂದ ತಮಿಳುನಾಡು ಪ್ರವೇಶಿಸಿ ನಂತರ ಕೇರಳದ ಕೆಲವು ಜಿಲ್ಲೆಗಳಲ್ಲಿ ಸಂಚರಿಸಿ ತಿರುವನಂತಪುರAನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟನೆಯ ಸಂಚಾಲಕರು ತಿಳಿಸಿದರು.

ಈ ಸಂದರ್ಭ ಉಸ್ಮಾನ್ ಫೈಝಿ, ಉಮ್ಮರ್ ಫೈಜಝಿ, ಎಂ ಅಬ್ದುಲ್ ರೆಹಮಾನ್, ಸಿಪಿಎಂ ಬಶೀರಾ ಹಾಜೀ, ಅಬ್ದುಲ್ಲಾ ಫೈಝಿ, ಅಶ್ರಫ್ ಫೈಝೀ ಮೊದಲಾದವರು ಹಾಜರಿದ್ದರು.