ಮರಗೋಡು, ಮೇ ೨೩ : ಗ್ರಾಮದ ಜನತಾ ಕಾಲೋನಿಯ ವಾಸುಕಿ ಸನ್ನಿಧಿಯಲ್ಲಿ ವಾಸುಕಿ ಕಲಶೋತ್ಸವ ಸಮಿತಿ ವತಿಯಿಂದ ನಾಗದೇವರ ವಾರ್ಷಿಕೋತ್ಸವ ಹಾಗೂ ಆಶ್ಲೇಷ ಬಲಿ ಪೂಜೆ ತಾ. ೨೧ ರಂದು ನೆರವೇರಿತು.

ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ ೮.೩೦ ಕ್ಕೆ ಪುಣ್ಯಾಹ , ಗಣಪತಿ ಹೋಮ, ೧೦.೩೦ ಕ್ಕೆ ಆಶ್ಲೇಷ ಬಲಿ ಪೂಜೆ, ಮಧ್ಯಾಹ್ನ ೧೨.೩೦ ಕ್ಕೆ ನಾಗತಂಬಿಲ, ಮಹಾಪೂಜೆ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ನಂತರ ಉಡುಪಿಯ ಶ್ರೀ ಮುತ್ತಿಗೆ ಮಠದ ಕೋಟೆ ಗೀತಾಲೇಖನ ಯಜ್ಞ ಸಮಿತಿಯ ಭಗವದ್ಗೀತಾ ಪ್ರಚಾರಕರಾದ ವಿದ್ವಾನ್ ಕೆ.ವಿ.ರಮಣ್ ಆಚಾರ್ ಅವರು ಭಗವದ್ಗೀತೆಯ ಮಹತ್ವ ಮತ್ತು ಕೋಟಿ ಗೀತಾ ಲೇಖನ ಯಜ್ಞದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಿದರು. ಸಮಿತಿಯ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು , ಸನ್ನಿಧಿಯ ಅಭಿವೃದ್ಧಿಗೆ ಸಹಕರಿಸಿದವರನ್ನು, ನಿವೃತ್ತಿ ಹೊಂದಲಿರುವ ಜನತಾ ಕಾಲೋನಿ ಅಂಗನವಾಡಿ ಕಾರ್ಯಕರ್ತೆ ಕೆ.ಟಿ. ರುಕ್ಮಿಣಿ ಹಾಗೂ ಫುಟ್ಬಾಲ್‌ನಲ್ಲಿ ರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸಿ ಸಾಧನೆ ತೋರುತ್ತಿರುವ ಸುಶ್ಮಿತಾ ರೈ ಅವರನ್ನು ಸನ್ಮಾನಿಸಲಾಯಿತು. ಅರ್ಚಕರಾದ ಗುರುರಾಜ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.