ಕುಶಾಲನಗರ, ಮೇ ೨೧: ಸ್ನೇಹಿತನ ಪತ್ನಿ ಹಾಗೂ ಮಗಳನ್ನು ಬೆದರಿಸಿ ಅವರುಗಳನ್ನು ಅಕ್ರಮವಾಗಿ ಕುಶಾಲನಗರದ ಮನೆಯೊಂದರಲ್ಲಿ ಕೂಡಿಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆಯ ಗುತ್ತಿಗೆದಾರ ಸಂಪತ್ ನಾಯರ್ ಎಂಬಾತನಿಗೆ ಮಹಿಳೆಯ ಕುಟುಂಬಸ್ಥರು ಹಿಗ್ಗಾಮುಗ್ಗ ಧರ್ಮದೇಟು ನೀಡಿ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಸಂಪತ್ ನಾಯರ್ ಸೋಮವಾರಪೇಟೆಯ ನಿವಾಸಿ ಯಾಗಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ಆತ ತನ್ನ ಸ್ನೇಹಿತನ ಪತ್ನಿ ಮತ್ತು ಮಗಳನ್ನು ಅಕ್ರಮವಾಗಿ ಕುಶಾಲನಗರದ ಬಡಾವಣೆಯೊಂದರ ಮನೆಯಲ್ಲಿ ಇರಿಸಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಸಂಪತ್‌ನನ್ನು ಪತ್ತೆ ಮಾಡಿ ಆತನಿಗೆ ಗೂಸಾ ನೀಡಿ, ನಂತರ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಹಾಗೂ ಆಕೆಯ ಪುತ್ರಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಸಂಪತ್ ನಾಯರ್‌ನನ್ನು ಬಂಧಿಸಲಾಗಿದೆ. ಅಲ್ಲದೆ, ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸಂಪತ್ ನಾಯರ್ ನೀಡಿದ ದೂರಿನ ಆಧಾರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಡಿವೈಎಸ್ಪಿ ಗಂಗಾಧರಪ್ಪ ತಿಳಿಸಿದ್ದಾರೆ.