ಕುಶಾಲನಗರ, ಮೇ ೨೧ : ಕುಶಾಲನಗರ ಪಟ್ಟಣದಲ್ಲಿ ಮನೆಯ ಬೀಗ ಮುರಿದು ಸರಣಿ ಕಳ್ಳತನ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ಕಳ್ಳತನ ನಡೆದಿದ್ದು ಗುಂಡುರಾವ್ ಬಡಾವಣೆಯಲ್ಲಿ ಲತಾ ಎಂಬವರ ಮನೆಯಲ್ಲಿ ಐದು ಗ್ರಾಂ ಚಿನ್ನ ಮತ್ತು ಮಂಜುನಾಥ ಎಂಬವರ ಮನೆಯಲ್ಲಿ ೪೦ ಸಾವಿರಕ್ಕೂ ಅಧಿಕ ನಗದು ಕಳುವಾಗಿದೆ. ಬಸವೇಶ್ವರ ಬಡಾವಣೆಯ ಮನೆಯೊಂದರಲ್ಲೂ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.