ಮಡಿಕೇರಿ, ಮೇ ೨೧: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾ ವ್ಯಾಪ್ತಿಯ ಮಂಡಿರ ಕುಟ್ಟಪ್ಪ (೭೨) ಅವರು ಮೂವತ್ತೊಕ್ಲು ಗ್ರಾಮದ ಮನೆಯಿಂದ ತಾ. ೬ರಂದು ಬೆಳಿಗ್ಗೆ ತೆರಳಿದವರು ಹಿಂತಿರುಗಿಲ್ಲ ಎಂದು ಅವರ ಪುತ್ರಿ ರೂಪ ದೂರು ನೀಡಿದ್ದಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ತಿಳಿಸುವಂತೆ (೨೨೯೦೦೦)- ೯೪೮೦೮೦೪೯೫೨ ಪೊಲೀಸ್ ಪ್ರಕಟಣೆ ಕೋರಿದೆ.