ನಾಪೋಕ್ಲು, ಮೇ ೨೧: ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಅಂತಿಮ ಪಂದ್ಯದಲ್ಲಿ ಚೆಕ್ಕೆರ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು. ಆಟ್ರಂಗಡ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಅAತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆಕ್ಕೆರ ತಂಡ ಒಂದು ವಿಕೆಟ್ ನಷ್ಟಕ್ಕೆ ೧೫೨ ರನ್ ಗಳಿಸಿ ಆಟ್ರಂಗಡ ತಂಡಕ್ಕೆ ೧೫೩ ರನ್‌ಗಳ ಗುರಿ ನೀಡಿತು. ಉತ್ತರವಾಗಿ ಆಡಿದ ಆಟ್ರಂಗಡ ತಂಡ ೩ ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿ ೬೮ ರನ್‌ಗಳ ಸೋಲನ್ನು ಅನುಭವಿಸಿತು. ಆ ಮೂಲಕ ಆಟ್ರಂಗಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಕ್ಕೆ ರೂ. ೭೫,೦೦೦ ನಗದು ಹಾಗೂ ಟ್ರೋಫಿಯನ್ನು ವಿತರಿಸ ಲಾಯಿತು. ರನ್ನರ್ ಅಪ್ ಸ್ಥಾನ ಪಡೆದ ತಂಡಕ್ಕೆ ರೂ.೫೦,೦೦೦ ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು.

ಇದಕ್ಕೂ ಮುನ್ನ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಮಂಡುವAಡ ಹಾಗೂ ಮಾಳೇಟಿರ ತಂಡಗಳ ನಡುವೆ ಪಂದ್ಯ ನಡೆಯಿತು ಮಂಡುವAಡ ತಂಡ ಐದು ವಿಕೆಟ್ ನಷ್ಟಕ್ಕೆ ೫೮ ರನ್ ಗಳಿಸಿ ಮಾಳೇಟಿರ ತಂಡಕ್ಕೆ ೫೯ ರನ್‌ಗಳ ಗುರಿ ನೀಡಿತು. ಮಾಳೇಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿ ಗೆಲುವು ಸಾಧಿಸಿತು. ಮಾಳೇಟಿರ ತಂಡ ಮೂರನೇ ಸ್ಥಾನವನ್ನು, ಮಂಡುವAಡ ತಂಡ

(ಮೊದಲ ಪುಟದಿಂದ) ನಾಲ್ಕನೇ ಸ್ಥಾನ ಪಡೆದುಕೊಂಡಿತು. ಏಪ್ರಿಲ್ ೨೨ ರಿಂದ ಆರಂಭವಾದ ಈ ಕ್ರಿಕೆಟ್ ನಮ್ಮೆಯಲ್ಲಿ ೨೫೨ ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಪಂದ್ಯ ಎಂಟು ಓವರ್‌ಗಳಿಗೆ ಸೀಮಿತವಾಗಿ ನಡೆಯಿತು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಒಲಂಪಿಯನ್ ಮನೆಯಪಂಡ ಸೋಮಯ್ಯ, ಬ್ರಿಗೇಡಿಯರ್ ಹರಿ ಚರಣ್ ಸಿಂಗ್ ಮುಖಂಡರಾದ ಪೈಕೆರ ಕಾಳಯ್ಯ, ಕೊಡಗಿನ ಸಿಡಿಲು ಮರಿ ಎಂದೇ ಖ್ಯಾತಿಯಾದ ಒಲಂಪಿಯನ್ ಬಿ.ಪಿ ಗೋವಿಂದ, ಬಿ.ಜೆ. ಫಿಲಿಪ್ಸ್, ಮಾಜಿ ಸಂಸದ ಅಸ್ಲಾಂ ಶೇರ್ ಖಾನ್, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಯಪ್ಪ, ಬಾಳೆಯಡ ಕ್ರಿಕೆಟ್ ಉತ್ಸವ ಸಮಿತಿ ಅಧ್ಯಕ್ಷ ಲೆ.ಕ. ಬಿ.ಕೆ. ಸುಬ್ರಮಣಿ, ರಿಪಬ್ಲಿಕ್ ಟಿ.ವಿ. ಅಧ್ಯಕ್ಷ ಚೇರಂಡ ಕಿಶನ್ ಪಾಲ್ಗೊಂಡಿದ್ದರು. ಮಾಜಿ ಸಂಸದ ಅಸ್ಲಾಂ ಶೇರ್ ಖಾನ್ ಮಾತನಾಡಿ ಹಾಕಿ ಮತ್ತು ಕ್ರಿಕೆಟ್ ಉತ್ಸವಗಳ ಮೂಲಕ ಕೊಡವ ಜನಾಂಗದವರು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ದೇಶದ ಎಲ್ಲಾ ಭಾಗಗಳಲ್ಲೂ ಈ ರೀತಿಯ ಕ್ರೀಡಾಕೂಟಗಳು ನಡೆದರೆ ದೇಶದಲ್ಲಿ ಉತ್ತಮ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.

ಒಲAಪಿಯನ್ ಬಿ.ಪಿ. ಗೋವಿಂದ ಮಾತನಾಡಿ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಆಯೋಜನೆ ಪ್ರಶಂಸನೀಯ ಎಂದರು.

ಒಲAಪಿಯನ್ ಮನೆಯಪಂಡ ಸೋಮಯ್ಯ ಮಾತನಾಡಿ ಸತತ ಪರಿಶ್ರಮದಿಂದ ಕ್ರೀಡಾಪಟುಗಳು ಯಶಸ್ಸು ಪಡೆಯಲು ಸಾಧ್ಯ ಎಂದರು. ಬ್ರಿಗೇಡಿಯರ್ ಹರಿಚರಣ್ ಸಿಂಗ್ ಮಾತನಾಡಿ, ಕೊಡಗಿನ ಸಂಸ್ಕೃತಿ ವಿಶಿಷ್ಟವಾದುದು. ಸೈನ್ಯ, ಕ್ರೀಡೆಗೆ ಸಮುದಾಯ ನೀಡುತ್ತಿರುವ ಕೊಡುಗೆ ಅನನ್ಯವಾದುದು ಎಂದರು. ಕ್ರಿಕೆಟ್ ಉತ್ಸವದಲ್ಲಿ ಅಧ್ಯಕ್ಷ ಸುಬ್ರಮಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚೆಪ್ಪುಡಿರÀ ಕಾರ್ಯಪ್ಪ ಹಾಗೂ ಕುಲ್ಲೆಟಿರ ಅರುಣ್ ಬೇಬಾ, ದಿವ್ಯ ಮಂದಪ್ಪ ವಿಕ್ಷಕ ವಿವರಣೆಯನ್ನು ನೀಡಿದರು. ಕಾಳಪ್ಪ ಸ್ವಾಗತಿಸಿದರು.

ಬಿ.ಜೆ. ಫಿಲಿಪ್ ಹಾಗೂ ಬಿ.ಪಿ. ಗೋವಿಂದ ಅಂತಿಮ ಪಂದ್ಯಕ್ಕೆ ಚಾಲನೆ ನೀಡಿದರು.

ಪಂದ್ಯಾವಳಿಯನ್ನು ಆಯೋಜಿಸಿದ್ದ ಬಾಳೆಯಡ ಕುಟುಂಬಸ್ಥರು ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ವಾದ್ಯಗೋಷ್ಠಿಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.

ಸಮಾರಂಭದ ಕೊನೆಯಲ್ಲಿ ೨೦೨೪ರ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ಅರಮಣಮಾಡ ತಂಡಕ್ಕೆ ಧ್ವಜವನ್ನು ಹಸ್ತಾಂತರಿಸಲಾಯಿತು.

ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.

- ದುಗ್ಗಳ ಸದಾನಂದ.