ಕಣಿವೆ, ಮೇ ೨೧: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ತುಂಬು ಗರ್ಭಿಣಿ ಕಾಡಾನೆಯೊಂದು ಆಗಂತುಕರು ಹಾರಿಸಿದ ಗುಂಡೇಟಿಗೆ ಬಲಿಯಾದ ಘಟನೆ ಗುಡ್ಡೆಹೊಸೂರು ಬಳಿಯ ರಸುಲ್‌ಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರೊಂದಿಗೆ ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಉಪವಲಯ ಅರಣ್ಯಾಧಿಕಾರಿ ರಂಜನ್ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.

ರಸುಲ್‌ಪುರ ಗ್ರಾಮದ ಜಗದೀಶ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಜರುಗಿದ ಘಟನೆಗೆ ಸಂಬAಧಿಸಿದAತೆ ರಸುಲ್ ಪುರ ಗ್ರಾಮದ ಡಿಂಪಲ್ ಹಾಗೂ ತೋಟ ಮಾಲೀಕ ಜಗದೀಶ್ ಎಂಬವರ ಮೇಲೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ಅವರಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.

ಅಮಲಿನಲ್ಲಿ ಕೃತ್ಯ ?

ಡಿಂಪಲ್ ಹಾಗೂ ಜಗದೀಶ್ ಎಂಬ ಇಬ್ಬರು ಮನೆಯ ಬಳಿ ಮದ್ಯದ ಅಮಲಿನಲ್ಲಿದ್ದ ಸಂದರ್ಭ ಎದುರಾದ ಕಾಡಾನೆಗೆ ಇಬ್ಬರು ಕೂಡ ಪ್ರತ್ಯೇಕ ಬಂದೂಕಿನಿAದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಅಂದಾಜು ೨೦ ರ ಪ್ರಾಯದ ಹೆಣ್ಣಾನೆಯಾಗಿರುವ ಈ ಕಾಡಾನೆ ತುಂಬು ಗರ್ಭಿಣಿಯಾಗಿದ್ದು ಹತವಾಗಿ ಬಿದ್ದ ದೃಶ್ಯ ಕಣ್ಣೀರು ತರಿಸಿತು. ಸಾವನ್ನಪ್ಪಿದ್ದ ಕಾಡಾನೆಯ ಉದರ ದೊಳಗಿದ್ದ

(ಮೊದಲ ಪುಟದಿಂದ) ಹೆಣ್ಣು ಜೀವ ತಾಯಿಯಾನೆಯ ಹೊಟ್ಟೆಯೊಳಗೆ ನರಳಿ ಜೀವ ಬಿಟ್ಟ ಚಿತ್ರಣವಂತು ಮನಕಲಕುವಂತಿತ್ತು.

ಹAತಕರು ಹಾರಿಸಿದ ಗುಂಡು ತುಂಬು ಗರ್ಭವತಿ ಕಾಡಾನೆಯ ಕಿವಿಯ ಹಿಂಬದಿಯಿAದ ಅದರ ಮೆದುಳಿಗೆ ನುಗ್ಗಿ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ. ಚೆಟ್ಟಿಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಸಂದರ್ಭ ಹೊಟ್ಟೆಯೊಳಗಿದ್ದ ಮರಿಯೊಂದಿಗೆ ಅಲ್ಲೇ ತೋಟದೊಳಗೆ ಬೃಹತ್ ಗುಂಡಿ ತೆಗೆದು ಕಾಡಾನೆಯ ಅಂತ್ಯಕ್ರಿಯೆ ನಡೆಸಲಾಯಿತು.

ಕಾಡಾನೆಗಳ ಗಣತಿ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ದುರ್ಘಟನೆ ಜರುಗಿದ್ದು ದುಷ್ಕರ್ಮಿಗಳ ಪತ್ತೆಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಬಲೆ ಬೀಸಿದೆ.

- ವರದಿ : ಕೆ.ಎಸ್.ಮೂರ್ತಿ