ಮಡಿಕೇರಿ, ಮೇ ೨೦: ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಮಿಂಚುತ್ತಿರುವ ಕೊಡವರು, ಸಂಭ್ರಮ, ಸಡಗರದೊಂದಿಗೆ ವಾಲಗಕ್ಕೆ ಹೆಜ್ಜೆ, ಶ್ರೀಮಂತ ಪರಂಪರೆಯ ಅನಾವರಣ, ಸಂಸ್ಕೃತಿಯ ಹೆಗ್ಗುರುತಿನ ಸ್ಮರಣೆ, ಕೊಡವರ ಸಮಾಗಮ...
ಹೌದು..ಈ ದೃಶ್ಯಾವಳಿಗಳು ಕಂಡು ಬಂದಿದ್ದು ಮಡಿಕೇರಿಯಲ್ಲಿ. ಮಂಜಿನ ನಗರಿ ಇಂದು ಕೊಡವರ ಸಮಾಗಮಕ್ಕೆ ಸಾಕ್ಷಿಯಾಗಿತ್ತು. ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಪ್ರಥಮ ವರ್ಷದ ಕೊಡವ ಯುವಮೇಳ ಜನಮನ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದ ರಾಜಬೀದಿಯಲ್ಲಿ ಸಾವಿರಾರು ಕೊಡವರ ವೈಭವಯುತ ಮೆರವಣಿಗೆ ನಡೆಯಿತು.
ನೂತನ ಬಸ್ ನಿಲ್ದಾಣದಿಂದ ಹೊರಟ ಮೆರವಣಿಗೆಯಲ್ಲಿ ಕೊಡವರು ಸಾಂಪ್ರದಾಯಿಕ ಉಡುಗೆ ಧರಿಸಿ ಪಾಲ್ಗೊಂಡರು. ಇದರೊಂದಿಗೆ ಯುವಕರು ಜನಾಂಗದ ಹೆಗ್ಗುರುತಾದ ಕೋವಿಯನ್ನು ಹಿಡಿದು ಉತ್ಸಾಹಭರಿತವಾಗಿ ತೆರಳಿದರು. ಮಹಿಳೆಯರು ಕಾವೇರಿ ಮಾತೆಯನ್ನು ಸ್ತುತಿಸುತ್ತ, ಪುರುಷರು ‘ಕೊಡವ ಸಂಸ್ಕೃತಿ ಉಳಿಯಲಿ' ಎಂದು ಘೋಷವಾಕ್ಯ ಕೂಗುತ್ತ, ಕೊಡವ ಸಾಧಕರು ಭಾವಚಿತ್ರ ಹಿಡಿದು, ದುಡಿಕೊಟ್ಟ್ ಪಾಟ್‌ನೊಂದಿಗೆ ವಾಲಗಕ್ಕೆ ಹೆಜ್ಜೆ ಹಾಕುತ್ತ ನಗರದ ಕಾಲೇಜು ರಸ್ತೆಯಿಂದ, ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಮಂಗೇರಿರ ಮುತ್ತಣ್ಣ ವೃತ್ತದಿಂದ ಸಾಗಿ ಜ.ತಿಮ್ಮಯ್ಯ ವೃತ್ತ, ಫೀ.ಮಾ. ಕಾರ್ಯಪ್ಪ ವೃತ್ತದ ತನಕ ತೆರಳಿ ಸಭಾಂಗಣಕ್ಕೆ ಬಂದು ಮೆರವಣಿಗೆಯನ್ನು ಮುಕ್ತಾಯ ಗೊಳಿಸಲಾಯಿತು.
ಕೊಡವ ರೈಡರ್ಸ್ ಕ್ಲಬ್‌ನ ಸವಾರರು ದ್ವಿಚಕ್ರ ವಾಹನದಲ್ಲಿ ತೆರಳಿ ಮೆರವಣಿಗೆಯ ವೈಭವವನ್ನು ಹೆಚ್ಚಿಸಿದರೆ, ರಾಷ್ಟç ಮಟ್ಟದ ಸ್ಕೇಟಿಂಗ್ ಪಟುಗಳಾದ ಮುಕ್ಕಾಟೀರ ಬ್ರಿಜ್ ಪೂವಯ್ಯ ಹಾಗೂ ವನ್ಷಿಕಾ ರಸ್ತೆಯುದ್ದಕ್ಕೂ ‘ಸ್ಕೇಟ್' ಮಾಡುತ್ತ ಗಮನ ಸೆಳೆದರು. ತೆರೆದ ವಾಹನದಲ್ಲಿ ಚಿತ್ರ ಕಲಾವಿದರುಗಳಾದ ಉದ್ದಪಂಡ ಹರ್ಷಿಕಾ ಪೂಣಚ್ಚ, ಉಳ್ಳಿಯಡ ಭುವನ್ ಪೊನ್ನಣ್ಣ ಕಾಣಿಸಿಕೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಮೆರವಣಿಗೆಯನ್ನು ಕಣ್ತುಂಬಿಕೊAಡರು.
ಮೆರವಣಿಗೆಯ ಸಂದರ್ಭ ಕೊಂಗAಡ ಗಣಪತಿ ಸ್ಮಾರಕ ಸೇರಿದಂತೆ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ, ಮಂಗೇರಿರ ಮುತ್ತಣ್ಣ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕಾವೇರಿ ಕಲಾಕ್ಷೇತ್ರದ ಆವರಣದಲ್ಲಿರುವ ಕಾವೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶುಭ ಕೋರಿದರು. ಮಡಿಕೇರಿ ಕೊಡವ ಸಮಾಜದ ಸದಸ್ಯರು ಮೆರವಣಿಗೆಯಲ್ಲಿ ಸಾಗಿ ಬಂದವರನ್ನು ಸಭಾಂಗಣಕ್ಕೆ ನೆಲ್ಲಕ್ಕಿದೀಪ, ದುಡಿಕೊಟ್ಟ್, ಕೊಂಬ್ ಕೊಟ್ಟ್ ಹಾಗೂ ವಾಲಗ ಸಹಿತ ಸ್ವಾಗತಿಸಿದರು.
ಕೊಡವರ ಸಮಾಗಮ : ಸುಮಾರು ೩ ಸಾವಿರಕ್ಕೂ ಹೆಚ್ಚು ಕೊಡವರು ಕಾರ್ಯಕ್ರಮದಲ್ಲಿ ಒಂದಾಗಿ ಸಂಭ್ರಮಿಸಿದರು. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಮುಂಬೈನಲ್ಲಿ ನೆಲೆಸಿರುವ ಕೊಡವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ರಾತ್ರಿಯ ತನಕವೂ ಉತ್ಸಾಹದಿಂದ ಸಾವಿರಾರು ಮಂದಿ ಇದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜನಾಂಗದ ಬೆಳವಣಿಗೆಗೆ ಪೂರಕವಾದ ಈ ರೀತಿಯ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಾಗಬೇಕು. ಜನರು ಕೂಡ ಪ್ರೋತ್ಸಾಹ ನೀಡಬೇಕೆಂಬ ಅನಿಸಿಕೆಗಳು ವ್ಯಕ್ತವಾದವು.
ಪ್ರಾಸ್ತಾವಿಕವಾಗಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಬ್ಬೂಮಿ ಟ್ರಸ್ಟ್ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಪ್ರಪಂಚದ ಗಮನಸೆಳೆದಿರುವ ಕೊಡವ ಸಂಸ್ಕೃತಿಯನ್ನು (ಮೊದಲ ಪುಟದಿಂದ) ಅನ್ಯರು ನಕಲು ಮಾಡುತ್ತಿದ್ದಾರೆ. ಇದರಿಂದ ಮೂಲ ಸಂಸ್ಕೃತಿಗೆ ಧಕ್ಕೆ ಬರುತ್ತಿದೆ. ವಿವಿಧ ಕಾರಣಗಳಿಂದ ಜನಾಂಗದವರು ಇಂದು ಚದುರಿ ಹೋಗುತ್ತಿರುವುದು ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗಿದೆ. ಮುಂದಿನ ೫ ವರ್ಷಗಳಲ್ಲಿ ಕೊಡಗಿನಲ್ಲಿ ಕೊಡವರೇ ನಿರ್ಣಾಯಕರು ಎಂದು ತೋರಿಸುವ ಪ್ರಯತ್ನ ಮಾಡಲಾಗುವುದು. ಕೊಡವ ಮನೆತನಗಳು ಗರ್ವದ ಸಂಕೇತವಾಗಿದ್ದು, ಮುಂದಿನ ದಿನಗಳಲ್ಲಿ ಯುವಕರನ್ನು ಒಗ್ಗೂಡಿಸಿ ಅವರಿಗೆ ಸಹಕಾರಿಯಾಗುವ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಡಾ. ಉಳ್ಳಿಯಡ ಪೂವಯ್ಯ, ಉಳ್ಳಿಯಡ ಡಾಟಿ ಪೂವಯ್ಯ, ಟ್ರಸ್ಟ್ ಪ್ರಮುಖರಾದ ಮಲ್ಲಮಾಡ ಪ್ರಭು ಪೂಣಚ್ಚ, ಅಣ್ಣೀರ ಹರೀಶ್ ಮಾದಪ್ಪ, ಜಮ್ಮಡ ಗಣೇಶ್ ಅಯ್ಯಣ್ಣ, ಪಾಲೇಂಗಡ ಅಮಿತ್ ಭೀಮಯ್ಯ, ಚೇದಂಡ ಶಮಿ ಮಾದಯ್ಯ, ಪಾಡೆಯಂಡ ದೀಪಕ್ ದೇವಯ್ಯ, ಅಚ್ಚಾಂಡೀರ ಪ್ರೀತಂ ಕುಶಾಲಪ್ಪ, ಅಚ್ಚಾಂಡೀರ ಪವನ್ ಪೆಮ್ಮಯ್ಯ, ಚೈಯ್ಯಂಡ ಸತ್ಯ ಗಣಪತಿ, ಚೋಕೀರ ಅನಿತಾ, ಅಪ್ಪಡೇರಂಡ ಅನಿತಾ ಯಶ್ವಂತ್, ಅಪ್ಪಂಡೇರAಡ ಯಶವಂತ್, ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಕೊಕ್ಕಲೇರ ಶ್ಯಾಂ ತಿಮ್ಮಯ್ಯ, ಮಲ್ಲೇಂಗಡ ನಿರನ್ ಸೋಮಣ್ಣ, ಶಾಂತೆಯAಡ ನಿರನ್ ನಾಚಪ್ಪ, ಚೋಕಂಡ ಸೂರಜ್ ಸೋಮಯ್ಯ, ಕನ್ನಂಡ ಕವಿತಾ ಬೊಳ್ಳಪ್ಪ, ಚೆರಿಯಪಂಡ ಪವನ್ ಬಿದ್ದಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಬೊಟ್ಟೋಳಂಡ ಕವನ್ ನಾಣಯ್ಯ, ಉಳುವಂಗಡ ಲೋಹಿತ್ ಭೀಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು..
ಅನ್ನಾಡಿಯಂಡ ವಿಕಾಸ್, ಅಂಜಪರವAಡ ಚೋಂದಮ್ಮ ನಿರೂಪಿಸಿ, ಉಳುವಂಗಡ ಲೋಹಿತ್ ಭೀಮಯ್ಯ ಜಬ್ಬೂಮಿ ಗೀತೆ ಹಾಡಿದರು.
-ಹೆಚ್.ಜೆ. ರಾಕೇಶ್