ಸುಂಟಿಕೊಪ್ಪ, ಮೇ ೨೦: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶನಿವಾರ ೩-೧ ಗೋಲುಗಳಿಂದ ಕೇರಳದ ಇ.ಕೆ.ಎನ್. ಎಫ್.ಸಿ ಇರಿಟ್ಟಿ ತಂಡವನ್ನು ಮಣಿಸಿ ವಿಜಯ ನಗರ ಎಫ್.ಸಿ. ವಿಜಯ ಮಾಲೆ ಧÀರಿಸಿತು.

ಇ.ಕೆ.ಎನ್. ಎಫ್.ಸಿ ಇರಿಟ್ಟಿ ತಂಡದ ಮುನ್ನಡೆ ಆಟಗಾರ ಅಫೀಸ್ ೧೦ನೇ ನಿಮಿಷದಲ್ಲಿ ವಿಜಯ ನಗರ ತಂಡದ ವಿರುದ್ಧ ಗೋಲು ಬಾರಿಸುವುದರ ಮೂಲಕ ಮನ್ನಡೆ ಸಾಧಿಸಿದರು. ನಂತರ ಎರಡು ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ದ್ವಿತೀಯಾರ್ಧದಲ್ಲಿ ವಿಜಯ ನಗರ ತಂಡವು ಎದುರಾಳಿ ವಿರುದ್ಧ ಬಿರುಸಿನ ಆಟವಾಡಿ ತಂಡದ ಸೋಹನ್ ೯ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿದರು.

ನಂತರ ವಿಜಯನಗರ ಎಫ್.ಸಿ ತಂಡದ ಮುನ್ನಡೆ ಆಟಗಾರ ಪ್ರೀತಮ್ ೧೧ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡವನ್ನು ಮುನ್ನಡೆಗೆ ತಂದರು. ವಿಜಯನಗರ ಎಫ್.ಸಿ ತಂಡದ ಶರತ್ ಗೋಲು ಹೊಡೆದ ಪರಿಣಾಮ ೩-೧ ಗೋಲುಗಳಿಂದ ಇ.ಕೆ.ಎನ್. ಎಫ್.ಸಿ ಇರಿಟ್ಟಿ ತಂಡವನ್ನು ಮಣಿಸಿ ವಿಜಯ ನಗರ ಎಪ್.ಸಿ ಗೆಲುವು ಸಾಧಿಸಿತು. ಎರಡನೇ ಪಂದ್ಯವು ಸೈಪಾನ್ ಎಫ್.ಸಿ ಕುಶಾಲನಗರ ಹಾಗೂ ಬೆಟ್ಟಗೇರಿ ಎಫ್.ಸಿ ತಂಡಗಳ ನಡುವೆ ನಡೆದು ೧-೦ ಗೂಲುಗಳಿಂದ ಬೆಟ್ಟಗೇರಿ ಎಫ್.ಸಿ ತಂಡ ಜಯಗಳಿಸಿತು. ಮೂರನೇ ಪಂದ್ಯವು ಮಿಡ್ ಸಿಟಿ ಎಫ್.ಸಿ ಸುಂಟಿಕೊಪ್ಪ ಹಾಗೂ ಕೇರಳದ ಸಿಟಿಜನ್ ಎಫ್.ಸಿ ಉಪ್ಪಳ ಈ ಎರಡು ತಂಡಗಳ ನಡುವೆ ನಡೆದು ಪಂದ್ಯಾಟದಲ್ಲಿ ೩-೧ ಗೋಲುಗಳಿಂದ ಮಿಡ್ ಸಿಟಿ ಎಫ್.ಸಿ ಸುಂಟಿಕೊಪ್ಪ ಜಯ ಸಾಧಿಸಿತು.